alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಟ್ರೆಂಡಿಂಗ್ ನಲ್ಲಿ ‘ಮುಂಗಾರು ಮಳೆ-2’ ಅಬ್ಬರ

mm2

ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಯಶಸ್ಸು ಗಳಿಸಿದ ಚಿತ್ರಗಳಲ್ಲೊಂದಾದ ಯೋಗರಾಜ್ ಭಟ್ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಅಭಿನಯಿಸಿದ್ದ ‘ಮುಂಗಾರು ಮಳೆ’ ಮತ್ತೊಮ್ಮೆ ಸುರಿಯಲು ಸಜ್ಜಾಗಿದೆ.

‘ಮೊಗ್ಗಿನ ಮನಸ್ಸು’ ನಿರ್ದೇಶಕ ಶಶಾಂಕ್ ನಿರ್ದೇಶನದಲ್ಲಿ ‘ಮುಂಗಾರು ಮಳೆ-2’ ಸಿನಿಮಾ ಮೂಡಿಬಂದಿದೆ. ಗಣೇಶ್ ಅವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ನೇಹಾ ಶೆಟ್ಟಿ, ಸಾಧು ಕೋಕಿಲ, ರವಿಶಂಕರ್ ಮೊದಲಾದ ಘಟಾನುಘಟಿ ಕಲಾವಿದರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಸಖತ್ ರಿಚ್ ಆಗಿ ಮೂಡಿಬಂದಿದೆ. ಆನ್ ಲೈನ್ ಟ್ರೆಂಡಿಂಗ್ ನಲ್ಲಿ ‘ಎಂಎಂ2’ ಹವಾ ಜೋರಾಗಿದೆ.

ಮತ್ತೊಂದು ವಿಶೇಷ ಏನೆಂದರೆ ಟೀಸರ್ ನಲ್ಲಿ ಸ್ಟಾರ್ ನಟರಾದ ಉಪೇಂದ್ರ, ಶಿವರಾಜ್ ಕುಮಾರ್ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಅವರು ಕಾಣಿಸಿಕೊಂಡಿದ್ದು, ‘ಮುಂಗಾರು ಮಳೆ-2’ ಕುರಿತಂತೆ ತಮಗಿರುವ ಕುತೂಹಲದ ಪ್ರಶ್ನೆಯನ್ನು ಕೇಳುತ್ತಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾ ಹೊಸ ನಿರೀಕ್ಷೆ ಹುಟ್ಟುಹಾಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...