alex Certify
ಕನ್ನಡ ದುನಿಯಾ       Mobile App
       

Kannada Duniya

ರಿಮೇಕ್ ಚಿತ್ರಗಳ ಹಿಂದೆ ಬಿದ್ದಿದೆ ಮೆಘಾಸ್ಟಾರ್ ಫ್ಯಾಮಿಲಿ

ram cahran ,allu arjun and dharma teja

ಟಾಲಿವುಡ್ ಚಿತ್ರರಂಗದಲ್ಲಿ ಮೆಘಾಸ್ಟಾರ್ ಚಿರಂಜೀವಿ ಫ್ಯಾಮಿಲಿಗೆ ತನ್ನದೇ ಆದ ಇಮೇಜ್ ಇದೆ. ಸ್ವಂತಿಕೆ ಮೂಲಕ ಗಮನ ಸೆಳೆದಿದ್ದ ಈ ಕುಟುಂಬದ ಸದಸ್ಯರು ಯಶಸ್ಸಿಗಾಗಿ ರಿಮೇಕ್ ಮೊರೆ ಹೋಗಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಚಿರಂಜೀವಿ ಕಂ ಬ್ಯಾಕ್ ಮಾಡಲು ಸೂಕ್ತ ಕತೆಯ ಹುಡುಕಾಟದಲ್ಲಿದ್ದು, ಅವರು ತಮಿಳಿನ ‘ಕತ್ತಿ’ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂದು ಬಹಳ ದಿನಗಳಿಂದಲೂ ಸುದ್ದಿ ಹರಿದಾಡುತ್ತಿವೆ. ‘ಮಗಧಿರ’ ಬಳಿಕ ಒಂದೇ ಒಂದು ಭರ್ಜರಿ ಹಿಟ್ ಸಿನೆಮಾ ಕೊಡಲು ಸಾಧ್ಯವಾಗದಿರುವ ರಾಮ್ ಚರಣ್ ಕೂಡ ರಿಮೇಕ್ ಮೊರೆ ಹೋಗಿದ್ದು, ತಮಿಳಿನ ‘ತನಿಒರುವನ್’ ರಿಮೇಕ್ ನಲ್ಲಿ ನಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಮೆಘಾ ಫ್ಯಾಮಿಲಿಯ ಮತ್ತೊಬ್ಬ ನಟ ಸಾಯಿ ಧರ್ಮ ತೇಜ್ ಕೂಡ ರಿಮೇಕ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಯಶಸ್ವಿ ಚಿತ್ರ ‘ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ’ ಯನ್ನು ಸಾಯಿ ಧರ್ಮತೇಜ ರಿಮೇಕ್ ಮಾಡಲಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ಸರೈನುಡು’ ಟ್ರೇಲರ್ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದು, ಅದಾದ ಬಳಿಕ ರಿಮೇಕ್ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ. ಪವನ್ ಕಲ್ಯಾಣ್ ‘ಸರ್ದಾರ್ ಗಬ್ಬರ್ ಸಿಂಗ್ ನಲ್ಲಿ ಅಭಿನಯಿಸುತ್ತಿದ್ದು, ಇದು ‘ದಬಾಂಗ್-2’ ರಿಮೇಕ್ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...