alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಲಿವುಡ್ ನಲ್ಲಿ ನಡೆಯಲಿದೆಯಾ ಸಂಕ್ರಾಂತಿ ಸಮರ…?

chiru

ಬರೋಬ್ಬರಿ 9 ವರ್ಷಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ಕಂ ಬ್ಯಾಕ್ ಮಾಡುತ್ತಿರುವ ‘ಖೈದಿ ನಂ. 150’ ಹಾಗೂ ಬಾಲಯ್ಯ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಗೌತಮಿಪುತ್ರ ಶಾತಕರ್ಣಿ’ ಸಂಕ್ರಾಂತಿಗೆ ತೆರೆಗೆ ಬರಲಿವೆ.

ಇದರೊಂದಿಗೆ ವಿಕ್ಟರಿ ವೆಂಕಟೇಶ್ ಅಭಿನಯದ ‘ಗುರು’, ನಾಗಾರ್ಜುನ ಅಭಿನಯದ ‘ಓಂ ನಮೋ ವೆಂಕಟೇಶಾಯ’ ಕೂಡ ಜನವರಿಯಲ್ಲೇ ರಿಲೀಸ್ ಆಗಲಿವೆ. ಅಲ್ಲಿಗೆ ಟಾಲಿವುಡ್ ನಲ್ಲಿ ಸಂಕ್ರಾಂತಿಗೆ ನಾಲ್ವರು ಬಿಗ್ ಸ್ಟಾರ್ ಗಳ ನಡುವೆ ಬಾಕ್ಸ್ ಆಫೀಸ್ ವಾರ್ ನಡೆಯುವುದು ಗ್ಯಾರಂಟಿ ಎನ್ನಲಾಗಿದೆ.

ಚಿರಂಜೀವಿ 9 ವರ್ಷದ ನಂತರ ಬಣ್ಣ ಹಚ್ಚುತ್ತಿದ್ದಾರೆ. ಪುತ್ರನ ಚಿತ್ರಗಳಲ್ಲಿ ಚಿರು ಕಾಣಿಸಿಕೊಳ್ಳುತ್ತಿದ್ದರೂ, ಅವರನ್ನು ಪೂರ್ಣ ಚಿತ್ರದಲ್ಲಿ ಕಣ್ತುಂಬಿಕೊಳ್ಳಬೇಕೆಂದು ಅಭಿಮಾನಿಗಳು ಕಾತರರಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ‘ಖೈದಿ ನಂ.150’ ಚಿತ್ರದಲ್ಲಿ ಚಿರು ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ತೇಜ, ಅಪ್ಪನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ವಿ.ವಿ. ವಿನಾಯಕ್ ನಿರ್ದೇಶನ ಚಿತ್ರಕ್ಕಿದೆ. ಶ್ರೀಯಾ, ಕಾಜೋಲ್ ಅಗರ್ವಾಲ್, ಲಕ್ಷ್ಮಿ ಮೊದಲಾದವರು ಅಭಿನಯಿಸಿದ್ದಾರೆ.

ಶಾತವಾಹನರ ದೊರೆ ‘ಗೌತಮಿಪುತ್ರ ಶಾತಕರ್ಣಿ’ಯಾಗಿ ಬಾಲಕೃಷ್ಣ ಕಾಣಿಸಿಕೊಂಡಿದ್ದು, ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟೀಸರ್ ನಿಂದ ಭಾರೀ ಸೌಂಡ್ ಮಾಡುತ್ತಿರುವ ‘ಗೌತಮಿಪುತ್ರ ಶಾತಕರ್ಣಿ’ ಮತ್ತೊಂದು ‘ಬಾಹುಬಲಿ’ ಎಂಬ ಮಾತುಗಳು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿವೆ.

ಇನ್ನು ವಿಕ್ಟರಿ ವೆಂಕಟೇಶ್ ಅಭಿನಯದ ‘ಗುರು’ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ. ನಾಗಾರ್ಜುನ ಭಕ್ತಿ ಪ್ರಧಾನ ಚಿತ್ರ ‘ಓಂ ನಮೋ ವೆಂಕಟೇಶಾಯ’ ಕೂಡ ಆರಂಭದಿಂದಲೂ ಕುತೂಹಲ ಮೂಡಿಸಿದೆ.

ಚಿರಂಜೀವಿ, ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ನಾಗಾರ್ಜುನ ಅಭಿನಯದ ಈ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಜನವರಿಯಲ್ಲಿ ಸಂಕ್ರಾಂತಿ ಹಿಂದೆ- ಮುಂದೆ ಬಿಡುಗಡೆಯಾಗಲಿವೆ.

ಟಾಲಿವುಡ್ ನಲ್ಲಿ ಸ್ಟಾರ್ ಸಿನಿಮಾಗಳಿಗೆ ಡಿಮ್ಯಾಂಡ್ ಜಾಸ್ತಿ. ಜನವರಿಯಲ್ಲಿ ನಾಲ್ವರು ಬಿಗ್ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗುತ್ತಿರುವುದು ಅಭಿಮಾನಿಗಳ ಸಂಭ್ರಮ ಹೆಚ್ಚಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...