alex Certify
ಕನ್ನಡ ದುನಿಯಾ       Mobile App
       

Kannada Duniya

ವೃತ್ತಿ ಜೀವನದ ವಿಶಿಷ್ಠ ಪಾತ್ರದಲ್ಲಿ ಪ್ರಿಯಾಂಕ ಕಮಾಲ್

priyanka-chopra-st

ಪ್ರಯೋಗಾತ್ಮಕ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ ‘ಮೇರಿಕೋಮ್’ನಲ್ಲಿ ಬಾಕ್ಸರ್ ಆಗಿ ಮಿಂಚಿದ್ದರು. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದರು. ಇದೀಗ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಜೈ ಗಂಗಾಜಲ್’ನಲ್ಲಿ ಪ್ರಿಯಾಂಕ ವಿಶಿಷ್ಠ ಪಾತ್ರದಲ್ಲಿ ಮಿಂಚಿದ್ದಾರೆ.

ಈ ಮೊದಲೇ ಬಿಡುಗಡೆಯಾಗಿದ್ದ ಟ್ರೇಲರ್ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಈಗ ‘ಜೈ ಗಂಗಾಜಲ್’ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದ್ದು, ರಿಯಾಲಿಸ್ಟಿಕ್ ಆಗಿ ಮೂಡಿಬಂದಿರುವ ದೃಶ್ಯಗಳು ನೋಡುಗರನ್ನು ಇಂಪ್ರೆಸ್ ಮಾಡುತ್ತವೆ. ಪ್ರಿಯಾಂಕ ಖಾಕಿ ತೊಟ್ಟು ಕಮಾಲ್ ಮಾಡಿದ್ದಾರೆ. ‘ಗಂಗಾಜಲ್’ ಹಿಂದೆ ಸಂಚಲನ ಸೃಷ್ಠಿಸಿದ ರೀತಿಯಲ್ಲೇ, ‘ಜೈ ಗಂಗಾಜಲ್’ ಕೂಡ ಭರ್ಜರಿ ಹವಾ ಸೃಷ್ಠಿಸಲಿದೆ ಎಂಬ ನಿರೀಕ್ಷೆ ಚಿತ್ರ ತಂಡಕ್ಕಿದೆ. ಸಿನಿಮಾದಲ್ಲಿ ಪ್ರಿಯಾಂಕ ಭ್ರಷ್ಟರನ್ನು ಬಗ್ಗುಬಡಿಯಲಿದ್ದಾರೆ.

ಖ್ಯಾತ ನಿರ್ದೇಶಕ ಪ್ರಕಾಶ್ ಝಾ ನಿರ್ದೇಶನ ಮಾಡಿರುವ ‘ಗಂಗಾಜಲ್’ 2003ರಲ್ಲಿ ತೆರೆಕಂಡಿತ್ತು. ಈಗ ಅವರ ನಿರ್ದೇಶನದಲ್ಲೇ ‘ಜೈ ಗಂಗಾಜಲ್’ ಮೂಡಿಬಂದಿದ್ದು, ಮಾರ್ಚ್ ನಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕ ಚೋಪ್ರಾ, ಪ್ರಕಾಶ್, ಮುರುಳಿ ಶರ್ಮ, ಆಯುಷ್ ಮೊದಲಾದವರು ನಟಿಸಿದ್ದಾರೆ. ‘ಜೈ ಗಂಗಾಜಲ್’ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಬಹುನಿರೀಕ್ಷೆ ಹುಟ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...