alex Certify
ಕನ್ನಡ ದುನಿಯಾ       Mobile App
       

Kannada Duniya

ಸುದೀಪ್ ರಿಂದಲೇ ಬಯಲಾಯ್ತು ‘ಬಿಗ್ ಬಾಸ್’ ರಹಸ್ಯ

‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವಂತೆಯೇ ಕುತೂಹಲ ಹೆಚ್ಚಾಗತೊಡಗಿದೆ. ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ 8 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

ಹಿಂದಿನ ನಾಲ್ಕೂ ಸೀಸನ್ ಗಳಲ್ಲಿ ವೀಕ್ಷಕರನ್ನು ಸೆಳೆದಿದ್ದ ಕಿಚ್ಚ ಸುದೀಪ್ 5 ನೇ ಸೀಸನ್ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಾರಿ ಹಬ್ಬದೂಟ ಗ್ಯಾರಂಟಿ ಎಂದು ಟ್ರೈಲರ್ ನಲ್ಲಿ ಹೇಳಿದ್ದ ಅವರು, ಕಾಮನ್ ಮ್ಯಾನ್ ಗಳ ಕುರಿತಾಗಿ ಕುತೂಹಲವಿದೆ. ಕ್ಯಾಮರಾ ಎದುರಿಸದ ಅವರು ಇಷ್ಟು ಕ್ಯಾಮರಾಗಳ ಮಧ್ಯೆ ಹೇಗಿರುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ. ಏನಾದರೂ ಸಾಧಿಸಬೇಕೆಂದುಕೊಂಡಿದ್ದ ಅಂತಹ ಪ್ರತಿಭಾವಂತರಿಗೆ ವೇದಿಕೆ ಸಿಕ್ಕಿರುವುದಿಲ್ಲ. ‘ಬಿಗ್ ಬಾಸ್’ ಉತ್ತಮ ಅವಕಾಶ ಕಲ್ಪಿಸಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಸೋಮವಾರದಿಂದ ಶನಿವಾರದವರೆಗೆ ಟಾಸ್ಕ್ ಸೇರಿದಂತೆ ಕಂಟೆಂಟ್ ಜಾಸ್ತಿ ಇರುತ್ತದೆ. ಭಾನುವಾರ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಬೀಳ್ಕೊಡಲಾಗುತ್ತದೆ. ಇದರೊಂದಿಗೆ ಸಿನಿಮಾ ಪ್ರಮೋಷನ್ ಇರಲಿದೆ. ಇದನ್ನು ಇನ್ನಷ್ಟು ಕುತೂಹಲಕಾರಿಯಾಗಿಸಲು ಆಹಾರ, ವಿಹಾರ, ಜೀವನದ ಮಾತುಕತೆಯೊಂದಿಗೆ ಮನರಂಜನೆ ನೀಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ಸ್ಪರ್ಧಿಗಳಿಗೆ ಸಲಹೆ ನೀಡಿರುವ ಅವರು, ಮನೆಯಲ್ಲಿ ಜಗಳ, ಭಿನ್ನಾಭಿಪ್ರಾಯ ಬರಬಹುದಾದರೂ, ಹೊಡೆದಾಡುವ ಹಂತಕ್ಕೆ ಹೋಗಬೇಡಿ, ಇದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...