alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆ ಬೆತ್ತಲಾಗೇ ಕ್ಯಾಮೆರಾ ಮುಂದೆ ಬಂದ ನಾಯಕ ನಟ…!

ನಾಯಕ ನಟರೊಬ್ಬರು ಅರೆ ಬೆತ್ತಲಾಗಿಯೇ ಪೊಲೀಸ್ ಠಾಣೆಗೆ ಬಂದ ವಿಚಿತ್ರ ಬೆಳವಣಿಗೆ ನಡೆದಿದೆ. ಅಂದ ಹಾಗೇ, ನಟ ಈ ರೀತಿ ಬಂದಿದ್ದು ಸಿನಿಮಾ ಪ್ರಚಾರಕ್ಕೆ ಎನ್ನಲಾಗಿದೆ.

‘ರೌಡಿ ಸುಬ್ಬು’ ಹೆಸರಿನ ಚಿತ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿತ್ರದ ಮೊದಲ ದೃಶ್ಯವನ್ನು ಪೊಲೀಸ್ ಠಾಣೆಯಲ್ಲಿ ಚಿತ್ರೀಕರಿಸಲಾಗಿದೆ. ನಟ ವರ್ಧನ್ ಮೊದಲ ದೃಶ್ಯದಲ್ಲಿ ಅರೆ ಬೆತ್ತಲಾಗಿಯೇ ಕಾಣಿಸಿಕೊಳ್ಳುವ ಮೂಲಕ ಅಲ್ಲಿದ್ದವರಿಗೆ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಹಾಗೂ ಮೊದಲ ದೃಶ್ಯ ಚಿತ್ರೀಕರಿಸಲಾಗಿದೆ. ಚಿತ್ರ ನೈಜತೆಯಿಂದ ಮೂಡಿ ಬರಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಪ್ರಚಾರ ತಂತ್ರವೋ, ನೈಜತೆಯೋ ಒಟ್ಟಿನಲ್ಲಿ ನಾಯಕ ನಟ ಅರೆ ಬೆತ್ತಲಾಗಿ ಮೊದಲ ಸೀನ್ ನಲ್ಲಿ ಕಾಣಿಸಿಕೊಂಡ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...