alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಎಸಿಪಿ ಪ್ರದ್ಯುಮನ್ ಸಾವಿನ ಸುದ್ದಿ

cid

ಪ್ರಸಿದ್ಧ ಟಿವಿ ಧಾರಾವಾಹಿ ಸಿಐಡಿ ನೋಡುಗರಿಗೊಂದು ಬ್ಯಾಡ್ ನ್ಯೂಸ್. ಎಸಿಪಿ ಪ್ರದ್ಯುಮನ್ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎಸಿಪಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಅವರು ಇನ್ಮುಂದೆ ತೆರೆ ಮೇಲೆ ಬರೋದಿಲ್ಲ.

ಎಸಿಪಿ ಸಾವನ್ನಪ್ಪುವ ಎಪಿಸೋಡ್ ಡಿಸೆಂಬರ್ 26 ರಂದು ಪ್ರಸಾರವಾಗಲಿದೆ. ವಾಸ್ತವವಾಗಿ ಎಸಿಪಿ ಪಾತ್ರ ಮಾಡ್ತಿರುವ ಶಿವಾಜಿ ಹಾಗೂ ದಯಾ ಮುಂದಿನ ದಿನಗಳಲ್ಲಿ ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ ನಿರ್ಮಾಪಕರು ಸಂಬಳವನ್ನು ಹೆಚ್ಚಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಶಾಶ್ವತವಾಗಿ ಪಾತ್ರವನ್ನು ಕೊನೆಗೊಳಿಸುವ ಮೂಲಕ ಧಾರಾವಾಹಿಯನ್ನು ಸಂಪೂರ್ಣ ಬಂದ್ ಮಾಡಲು ತಂಡ ಮುಂದಾಗಿದೆ ಎನ್ನಲಾಗ್ತಾ ಇದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಿವಾಜಿ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದು ಅತ್ಯಂತ ಕೆಟ್ಟ ಪೇಜ್. ಇದು ವಾಸ್ತವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮನೆಯವರು ಇದರಿಂದ ಮುಜುಗರಕ್ಕೀಡಾಗಿದ್ದಾರೆ. ಈವರೆಗೂ ಹೃದಯಾಘಾತವಾಗುವ ಯಾವುದೇ ದೃಶ್ಯವನ್ನು ಚಿತ್ರೀಕರಿಸಿಲ್ಲ. ಈಗ ಬಿತ್ತರವಾಗಿರುವ ಫೋಟೋ ಫೋಟೋಶಾಪ್ ನದ್ದು. ನಾನು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಹಾಗೆ ಶೋ ಬಿಡುವ ಉದ್ದೇಶ ನನಗಿಲ್ಲ ಎಂದಿದ್ದಾರೆ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...