alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜಾಗಾಂಧಿ ಆದ್ರು ‘ಚೋಟಾ ಬಾಸ್’ ವಿನ್ನರ್

Pooja-Gandhi 12456

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಮನೆಯಿಂದ ಸ್ಪರ್ಧಿಗಳಾದ ಶ್ರುತಿ ಹಾಗೂ ಚಂದನ್ ಅವರನ್ನು ವೇದಿಕೆಗೆ ಕರೆತಂದ ಕಿಚ್ಚ ಸುದೀಪ್ ವೇದಿಕೆಗೆ ಬರುತ್ತಿದ್ದಂತೆ ವೀಕ್ಷಕರಲ್ಲಿ ಯಾರು ಗೆಲ್ಲಬಹುದೆಂಬ ಕುತೂಹಲ ಹೆಚ್ಚಾಗಿತ್ತು.

ಸ್ವಲ್ಪ ಹೊತ್ತು ಕಾಯಿಸಿದ ಸುದೀಪ್, ಅಂತಿಮವಾಗಿ ಶ್ರುತಿ ಅವರ ಕೈ ಎತ್ತುವ ಮೂಲಕ ವಿಜೇತರೆಂದು ಘೋಷಿಸಿದರು. ಈ ವೇಳೆ ಕಣ್ಮುಚ್ಚಿಕೊಂಡಿದ್ದ ಶ್ರುತಿ ವೇದಿಕೆಯಲ್ಲಿ ಭಾಗಿ ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಇದಕ್ಕೂ ಮೊದಲು ವಿವಿಧ ಸ್ಪರ್ಧಿಗಳಿಗಾಗಿ ‘ಚೋಟಾ ಬಾಸ್’ ಅವಾರ್ಡ್ ನೀಡಲಾಯಿತು. ಕೃತಿಕಾ ಅವರಿಗೆ ಕ್ಯಾಮೆರಾ ಜೊತೆ ಹೆಚ್ಚಾಗಿ ಮಾತನಾಡಿದ್ದಕ್ಕೆ ಅವಾರ್ಡ್ ನೀಡಲಾಯಿತು. ‘ಚೋಟಾ ಬಾಸ್’ ಡಂಕಣಕ್ಕ ಅವಾರ್ಡ್ ಸುನಾಮಿ ಕಿಟ್ಟಿಗೆ ನೀಡಲಾಯಿತು.

‘ಚೋಟಾಬಾಸ್’ ಅಳುಮುಂಜಿ ಅವಾರ್ಡ್ ಪೂಜಾಗಾಂಧಿ ಅವರ ಪಾಲಾಯಿತು. ಇದರೊಂದಿಗೆ 1 ಲಕ್ಷ ರೂ. ಬಹುಮಾನದ ಜಿಮಿನಿ ಕುಕಿಂಗ್ ಆಯಿಲ್ ಹೆಲ್ತಿ ಕಂಟೆಸ್ಟೆಂಟ್ ಅವಾರ್ಡ್ ಅನ್ನು ಪೂಜಾಗಾಂಧಿ ಅವರಿಗೆ ನೀಡಲಾಯಿತು. ಸಂಸ್ಥೆಯ ಮಾರ್ಕೇಟಿಂಗ್ ಮ್ಯಾನೇಜರ್ ವಿವೇಕ್ ಶರ್ಮ ಚೆಕ್ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...