alex Certify
ಕನ್ನಡ ದುನಿಯಾ       Mobile App
       

Kannada Duniya

ಚಿರಂಜೀವಿ ಪುತ್ರಿಯ ವಿವಾಹಕ್ಕೆ ಭರ್ಜರಿ ಸಿದ್ದತೆ

dc-Cover-m3eanlic3rjtmjdln6c95ufi50-20160213235406.Medi

ಮೆಗಾ ಸ್ಟಾರ್ ಚಿರಂಜೀವಿಯವರ ಪುತ್ರಿ ಶ್ರೀಜಾ ಅವರ ವಿವಾಹಕ್ಕೆ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಶ್ರೀಜಾ ತಾನು ಪ್ರೀತಿಸುತ್ತಿದ್ದ ಸಿರೀಶ್ ಭಾರದ್ವಾಜ್ ಜೊತೆ ಓಡಿ ಹೋಗಿ ವಿವಾಹವಾದಾಗ ಚಿರಂಜೀವಿ ಶಾಕ್ ಆಗಿದ್ದರು.

2007 ರಲ್ಲಿ ನಡೆದಿದ್ದ ಈ ವಿವಾಹ ಸಂದರ್ಭದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಶ್ರೀಜಾ, ರಕ್ಷಣೆ ಕೋರಿ ಅಂದು ಪೊಲೀಸರ ಮೊರೆ ಹೋಗಿದ್ದರು. ಆದರೆ ಈ ಮದುವೆ ಬಹಳ ಕಾಲ ಉಳಿಯಲಿಲ್ಲ. ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿದ ಶ್ರೀಜಾ 2014 ರಲ್ಲಿ ಸಿರೀಶ್ ಭಾರದ್ವಾಜ್ ರಿಂದ ವಿಚ್ಚೇದನ ಪಡೆದಿದ್ದರು. ಇವರಿಗೆ ಮಗಳೂ ಜನಿಸಿದ್ದಳು.

ವಿಚ್ಚೇದನದ ಬಳಿಕ ಶ್ರೀಜಾ ಅಮೆರಿಕಾದಲ್ಲಿ ನೆಲೆಸಿದ್ದು, ಮಗಳಿಗೆ ಮತ್ತೊಂದು ವಿವಾಹ ಮಾಡಲು ಮುಂದಾಗಿದ್ದ ಚಿರಂಜೀವಿಯವರಿಗೆ ಇದಕ್ಕೆ ಮಗಳೂ ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ. ಚಿತ್ತೂರು ಮೂಲದ ಯುವಕನ ಜೊತೆ ಶ್ರೀಜಾ ವಿವಾಹ ಮಾರ್ಚ್ ನಲ್ಲಿ ನೆರವೇರಲಿದೆ ಎನ್ನಲಾಗಿದ್ದು, ಇತ್ತೀಚೆಗೆ ಎರಡೂ ಕುಟುಂಬಗಳ ಸದಸ್ಯರು ಚಿರಂಜೀವಿಯವರ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಪಾಲ್ಗೊಂಡು ದಿನಾಂಕ ನಿಗದಿ ಮಾಡಿದ್ದಾರೆಂದು ಹೇಳಲಾಗಿದೆ. ಈ ಮಾತುಕತೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೆ ಚಿರಂಜೀವಿಯವರ ಸಹೋದರ ಪವನ್ ಕಲ್ಯಾಣ್ ತಮ್ಮ ‘ಸರ್ದಾರ್ ಗಬ್ಬರ್ ಸಿಂಗ್’ ಚಿತ್ರದ ಚಿತ್ರೀಕರಣವನ್ನು ಅಂದು ರದ್ದುಗೊಳಿಸಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...