alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತೆ ಕಂತೆಗಳಿಗೆ ತೆರೆ: ಚಿರು –ಮೇಘನಾ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ನಲ್ಲಿ ತಾರಾ ಜೋಡಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಲಿದೆ. ಹಿರಿಯ ತಾರಾ ದಂಪತಿ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಮತ್ತು ನಟ ಅರ್ಜುನ್ ಸರ್ಜಾ ಅಳಿಯ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ನಿಶ್ಚಿತಾರ್ಥ ಇದೇ ಅಕ್ಟೋಬರ್ 22 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.

‘ಆಟಗಾರ’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದು, ಇವರು ಪ್ರೀತಿ ಕುರಿತಾಗಿ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಈ ಗಾಳಿ ಸುದ್ದಿಗೆ ತೆರೆ ಬಿದ್ದಿದ್ದು, ಇದೇ ತಿಂಗಳು ನಿಶ್ಚಿತಾರ್ಥ, ವರ್ಷಾಂತ್ಯಕ್ಕೆ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

‘ವಾಯುಪುತ್ರ’, ‘ವರದನಾಯಕ’ ಮೊದಲಾದ ಚಿತ್ರಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದಾರೆ. ಮೇಘನಾ ರಾಜ್ ‘ರಾಜಾಹುಲಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರಿಬ್ಬರು ಜೊತೆಯಾಗುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿ ಸೇರ್ಪಡೆಯಾದಂತಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...