alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ಚಿರಂಜೀವಿ ಸಿನಿಮಾ

chiru

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಖೈದಿ ನಂ.150’ ಚಿತ್ರ, ವಿಶ್ವದಾದ್ಯಂತ ಸುಮಾರು 4500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ.

ರಾಜ್ಯದಲ್ಲಿಯೂ ಚಿತ್ರದ ಹವಾ ಜೋರಾಗಿದೆ. ರಾಯಚೂರಿನಲ್ಲಿ ರಾತ್ರಿಯೇ ಚಿತ್ರಮಂದಿರದ ಬಳಿ ನೆರೆದಿದ್ದ ಅಭಿಮಾನಿಗಳು ಪ್ರದರ್ಶನ ಆರಂಭಿಸಬೇಕೆಂದು ಗಲಾಟೆ ಮಾಡಿದ್ದಾರೆ.

ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದು, ಸುಮಾರು 20 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿಯೂ ‘ಖೈದಿ ನಂ.150’ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಬೆಳಗಿನ ಜಾವದಿಂದಲೇ ಚಿತ್ರಮಂದಿರದ ಬಳಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟನ ಕಟೌಟ್ ಗೆ ಹಾರ ಹಾಕಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಬರೋಬ್ಬರಿ 10 ವರ್ಷಗಳ ಬಳಿಕ ಚಿರಂಜೀವಿ ಚಿತ್ರ ರಿಲೀಸ್ ಆಗಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದೆ. ಚಿಕ್ಕಬಳ್ಳಾಪುರ ವಾಣಿ ಚಿತ್ರ ಮಂದಿರದ ಬಳಿ ಅಭಿಮಾನಿಯೊಬ್ಬ ಚಿತ್ರದ ಪೋಸ್ಟರ್ ಗೆ ರಕ್ತದ ಬೊಟ್ಟು ಇಟ್ಟಿದ್ದಾನೆ. ಕೈ ಬೆರಳು ಕೊಯ್ದುಕೊಂಡು ಪೋಸ್ಟರ್ ಮೇಲೆ ಬೊಟ್ಟು ಇಟ್ಟು ಅಭಿಮಾನ ವ್ಯಕ್ತಪಡಿಸಿದ್ದಾನೆ. ಒಟ್ಟಾರೆ ಚಿರಂಜೀವಿ ಸಿನಿಮಾ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...