alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಚೀನಾ ಪ್ರಧಾನಿಗಳ ಮಧ್ಯೆ ‘ದಂಗಲ್’ ಮಾತು

Indian Prime Minister Narendra Modi, left, and Chinese President Xi Jinping pose for a photo prior to their meeting in Xian, Shaanxi province, China, Thursday, May 14, 2015. Modi is visiting China this week to build friendship between the two Asian giants despite a long history of disputes and rivalries, along with some areas of cooperation, especially in the economic sphere. (Kim Kyung-Hoon/Pool Photo via AP)

ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಚೀನಾದಲ್ಲಿ ಸೂಪರ್ ಹಿಟ್ ಆಗಿದೆ. ಅಲ್ಲಿನ ಜನಸಾಮಾನ್ಯರು ಮಾತ್ರವಲ್ಲ ಖುದ್ದು ಪ್ರಧಾನಿ ಕ್ಸಿ ಜಿನ್ ಪಿಂಗ್ ಕೂಡ ‘ದಂಗಲ್’ ಚಿತ್ರವನ್ನು ವೀಕ್ಷಿಸಿದ್ದಾರೆ, ಸಿನೆಮಾವನ್ನು ಮೆಚ್ಚಿಕೊಂಡಿದ್ದಾರೆ.

ಕಜಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರೋ ಶೃಂಗಸಭೆಯಲ್ಲಿ ಇವತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪಿಎಂ ಕ್ಸಿ ಜಿನ್ ಪಿಂಗ್ ಭೇಟಿಯಾದ್ರು. ಈ ವೇಳೆ ‘ದಂಗಲ್’ ಚಿತ್ರದ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ತಾವು ‘ದಂಗಲ್’ ವೀಕ್ಷಿಸಿದ್ದು, ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ ಅಂತಾ ಜಿನ್ ಪಿಂಗ್, ಮೋದಿ ಬಳಿ ಹೇಳಿದ್ದಾರೆ.

‘ದಂಗಲ್’ ಚಿತ್ರ ಭಾರತ ಮತ್ತು ಚೀನಾ ಮಧ್ಯೆ ಹೊಸ ಸಂಬಂಧ ಬೆಸೆಯಲಿದೆ ಅಂತಾ ಮೋದಿ ಹಾಗೂ ಜಿನ್ ಪಿಂಗ್ ಅಭಿಪ್ರಾಯಪಟ್ಟಿದ್ದಾರೆ. ಚೀನಾದಲ್ಲಿ ಮೇ 5 ರಂದು ಬಿಡುಗಡೆಯಾಗಿರುವ ‘ದಂಗಲ್’ ಚಿತ್ರ ಇದುವರೆಗೆ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚೀನಾದಲ್ಲಿ ಹಾಲಿವುಡ್ ಚಿತ್ರವನ್ನು ಬಿಟ್ರೆ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನೆಮಾ ಅಂದ್ರೆ ‘ದಂಗಲ್’. ಅಮೀರ್ ಖಾನ್ ರ ‘ಪಿಕೆ’ ಹಾಗೂ ‘ತ್ರೀ ಈಡಿಯಟ್ಸ್’ ಚಿತ್ರಗಳು ಕೂಡ ಚೀನಾದಲ್ಲಿ ಸೂಪರ್ ಹಿಟ್ ಆಗಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...