alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ದಿನಾಚರಣೆ : ತೈಮೂರ್ ಗೆ ಸಿಕ್ತು 1.30 ಕೋಟಿ ರೂ.ಮೌಲ್ಯದ ಉಡುಗೊರೆ

ಇಂದು ಮಕ್ಕಳ ದಿನಾಚರಣೆ. ಎಲ್ಲೆಡೆ ಮಕ್ಕಳ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನವಾಬ್ ತೈಮೂರ್ ನೆನೆಪು ಮಾಡಿಕೊಳ್ಳದೆ ಇರೋಕೆ ಸಾಧ್ಯವಿಲ್ಲ. ಛೋಟಾ ನವಾಬ್, ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಮಗ ತೈಮೂರ್ ಗೆ ತಂದೆ ಸೈಫ್ ಭರ್ಜರಿ ಉಡುಗೊರೆ ನೀಡಿದ್ದಾರೆ.

ಮಕ್ಕಳ ದಿನಾಚರಣೆ ಅಂಗವಾಗಿ ಸೈಫ್ ಅಲಿ ಖಾನ್ ಮಗ ತೈಮೂರ್ ಗೆ 1.30 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ನೀಡಿದ್ದಾರೆ. ತೈಮೂರ್ ಗಾಗಿ ಸೈಫ್ ಎಸ್ ಆರ್ ಟಿಯ ಕಾರ್ ಜೀಪನ್ನು ಖರೀದಿ ಮಾಡಿದ್ದಾರೆ. ಸೈಫ್ ಕಾರ್ ಖರೀದಿ ಮಾಡ್ತಿದ್ದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟ ಮಗನ ಸುರಕ್ಷತೆ ಅತಿ ಮುಖ್ಯ. ಹಾಗಾಗಿ ಇದನ್ನು ಖರೀದಿ ಮಾಡ್ತಿದ್ದೇನೆ. ಇದ್ರ ಹಿಂಬದಿಗೆ ಬೇಬಿ ಸೀಟ್ ಇದ್ದು, ಇದು ತೈಮೂರ್  ಸುರಕ್ಷತೆಗೆ ಒಳ್ಳೆಯದು ಎಂದಿದ್ದಾರೆ.

ಕೆಂಪು ಬಣ್ಣದ ಈ ಕಾರನ್ನು ತೈಮೂರ್ ಗಾಗಿಯೇ ಮೀಸಲಿಡುವುದಾಗಿ ಸೈಫ್ ಹೇಳಿದ್ದಾರೆ. ತೈಮೂರ್ ಜೊತೆ ಮೊದಲ ರೈಡ್ ಗೆ ಹೋಗಲು ಸೈಫ್ ಉತ್ಸುಕರಾಗಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...