alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈಗೆ ಹೋಗುವ ಮುನ್ನ ಶ್ರೀದೇವಿ ಆರೋಗ್ಯ ಹೇಗಿತ್ತು?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪಾರ್ಥೀವ ಶರೀರಿ ಮುಂಬೈ ತಲುಪಿದ್ದು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಂದು 3.30ರಿಂದ 5.30ರೊಳಗೆ ಶ್ರೀದೇವಿ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ ಶ್ರೀದೇವಿ ಆಪ್ತ ಸ್ನೇಹಿತೆ ಪಿಂಕಿ ರೆಡ್ಡಿ ಶ್ರೀದೇವಿ ಆರೋಗ್ಯದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದ್ದಾರೆ.

ಶ್ರೀದೇವಿ ಮದುವೆಗೆಂದು ದುಬೈಗೆ ಹೋಗುವ ಮುನ್ನ ಪಿಂಕಿಗೆ ಕರೆ ಮಾಡಿದ್ದರಂತೆ. ಈ ವೇಳೆ ಶ್ರೀದೇವಿ ಆರೋಗ್ಯ ಹದಗೆಟ್ಟಿತ್ತಂತೆ. ಶ್ರೀದೇವಿಗೆ ತೀವ್ರ ಜ್ವರವಿತ್ತು ಎಂದು ಮಾಧ್ಯಮವೊಂದರ ಜೊತೆ ಮಾತನಾಡಿದ ಪಿಂಕಿ ರೆಡ್ಡಿ ಹೇಳಿದ್ದಾರೆ. ಶ್ರೀದೇವಿ ಸಾವಿನ ನಂತ್ರ ಬೋನಿ ಕಪೂರ್ ಮೇಲೆ ಅನುಮಾನ ಮೂಡಿತ್ತು. ಈ ವಿಚಾರದ ಬಗ್ಗೆಯೂ ಪಿಂಕಿ ಸ್ಪಷ್ಟನೆ ನೀಡಿದ್ದಾರೆ. ಬೋನಿ ಕಪೂರ್ ಹಾಗೂ ಶ್ರೀದೇವಿ ತುಂಬಾ ಆಪ್ತರಾಗಿದ್ದರು. ಅವರಿಬ್ಬರ ಮಧ್ಯೆ ಎಂದೂ ಜಗಳವಾಗಿರಲಿಲ್ಲ ಎಂದು ಪಿಂಕಿ ಹೇಳಿದ್ದಾರೆ.

ಶ್ರೀದೇವಿ ಪಾರ್ಥೀವ ಶರೀರಿ ನೋಡ್ತಿದ್ದಂತೆ ಇಬ್ಬರು ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲವೆಂದು ಮೂಲಗಳು ಹೇಳಿವೆ. ಜಾಹ್ನವಿ ಹಾಗೂ ಖುಷಿ ಅಮ್ಮ, ಅಮ್ಮ ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದಾರಂತೆ. ತಾಯಿ ನಮ್ಮ ಮುಂದಿಲ್ಲ ಎಂಬ ಸತ್ಯವನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲವಂತೆ. ಅನಿಲ್ ಕಪೂರ್, ಕರಣ್ ಜೋಹರ್ ಸೇರಿದಂತೆ ಶ್ರೀದೇವಿ ಸಂಬಂಧಿಕರು ಹಾಗೂ ಸ್ನೇಹಿತರು ಜಾಹ್ನವಿ, ಖುಷಿಗೆ ಧೈರ್ಯ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...