alex Certify
ಕನ್ನಡ ದುನಿಯಾ       Mobile App
       

Kannada Duniya

‘ಜಿಗರ್ ಥಂಡ’ ಪಾತ್ರದ ರಹಸ್ಯ ಬಿಚ್ಚಿಟ್ಟ ಚಿಕ್ಕಣ್ಣ

chikkanna j 23

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಾಸ್ಯನಟ ಕಾಮಿಡಿ ಸ್ಟಾರ್ ಚಿಕ್ಕಣ್ಣ, ನಾಯಕ ನಟನಾಗಿಯೂ ಮಿಂಚಿದ್ದಾರೆ. ಇತ್ತೀಚಿನ ಬಹುತೇಕ ಸಿನಿಮಾಗಳಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದು, ಅವರು ತೆರೆ ಮೇಲೆ ಬಂದರೆ, ಶಿಳ್ಳೆ, ಚಪ್ಪಾಳೆಯ ಅಬ್ಬರ ಮುಗಿಲು ಮುಟ್ಟಿರುತ್ತದೆ.

 

ತಮ್ಮದೇ ಆದ ಶೈಲಿಯ ಹಾಸ್ಯಗಳಿಂದ ಗಮನ ಸೆಳೆಯುವ ಚಿಕ್ಕಣ್ಣ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಟ. ಈಗಿನ ಸ್ಟಾರ್ ನಟರಿಂದ ಹಿಡಿದು, ಹೊಸಬರ ಚಿತ್ರಗಳಿಗೂ ಚಿಕ್ಕಣ್ಣ ಬೇಕೇ ಬೇಕು. ಚಿಕ್ಕಣ್ಣ ಅಭಿನಯಿಸಿರುವ ಮತ್ತೊಂದು ಚಿತ್ರ ರಿಲೀಸ್ ಆಗುತ್ತಿದೆ. ಬಹುನಿರೀಕ್ಷೆಯ ‘ಜಿಗರ್ ಥಂಡ’ ಸಿನಿಮಾದಲ್ಲಿ ಚಿಕ್ಕಣ್ಣ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ರಿಮೇಕ್ ಚಿತ್ರವಾಗಿರುವ ‘ಜಿಗರ್ ಥಂಡ’ದಲ್ಲಿನ ಪಾತ್ರಕ್ಕಾಗಿ ಚಿಕ್ಕಣ್ಣ ಮೂಲ ಸಿನಿಮಾ ನೋಡಿಲ್ಲ ಎನ್ನಲಾಗಿದೆ.

 

ಹಾಸ್ಯವನ್ನು ಮೂಲ ಚಿತ್ರದಿಂದ ನಕಲು ಮಾಡುವುದಕ್ಕಿಂತ ನಿರ್ದೇಶಕರಿಂದ ತಮ್ಮ ಪಾತ್ರದ ಬಗ್ಗೆ ತಿಳಿದುಕೊಂಡು ನಟಿಸುವುದು ತನಗೆ ಹೆಚ್ಚು ಇಷ್ಟವಾಗುತ್ತದೆ. ಮತ್ತೊಬ್ಬ ನಟರನ್ನು ಅನುಕರಿಸುವುದು ಇಷ್ಟವಿಲ್ಲದ ಕಾರಣ, ಮೂಲ ಸಿನಿಮಾ ನೋಡಲಿಲ್ಲ. ‘ಜಿಗರ್ ಥಂಡ’ದಲ್ಲಿ ನಿರ್ದೇಶಕರಿಂದ ಪಾತ್ರದ ಬಗ್ಗೆ ತಿಳಿದುಕೊಂಡು ಅಭಿನಯಿಸಿದ್ದೇನೆ ಎಂದು ಚಿಕ್ಕಣ್ಣ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...