alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿಧಿ ಜೊತೆ ನಿಶ್ಚಿತಾರ್ಥ: ‘ಬಿಗ್ ಬಾಸ್’ ಚಂದನ್ ಹೇಳಿದ್ದೀಗೆ…

‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಮನೆಯಿಂದ ಹೊರ ಬಂದ ಬಳಿಕ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ(ವೈಷ್ಣವಿ) ಅವರೊಂದಿಗೆ ಫೆಬ್ರವರಿ 11 ರಂದು ಚಂದನ್ ನಿಶ್ಚಿತಾರ್ಥ ನಡೆಯಲಿದೆ. ಚಂದನ್ ಮತ್ತು ಸನ್ನಿಧಿ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸನ್ನಿಧಿ, ನಮ್ಮ ನಿಶ್ಚಿತಾರ್ಥ ನಡೆಯುತ್ತಿಲ್ಲ. ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಇಂತಹ ಗಾಳಿ ಸುದ್ದಿಗಳಿಂದ ತಮಗೆ ತೊಂದರೆಯಾಗುತ್ತದೆ. ಅದಕ್ಕೆಲ್ಲ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.

ಚಂದನ್ ಶೆಟ್ಟಿ ಕೂಡ ಇದೇ ರೀತಿ ಹೇಳಿದ್ದು, ಸನ್ನಿಧಿಯವರನ್ನು ಧಾರಾವಾಹಿಯಲ್ಲಿ ನೋಡಿದ್ದೇನೆ ಹೊರತು ಅವರೊಂದಿಗೆ ಪರಿಚಯವಿಲ್ಲ ಎಂದು ಹೇಳಿದ್ದಾರೆ. ‘ಬಿಗ್ ಬಾಸ್’ನಿಂದ ಬಂದ ನಂತರ ಇರುವ ಸಮಯವನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...