alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಾರಾ ನಟ ಚಂದನ್…?

ಕಿರುತೆರೆ ಅನೇಕ ನಟರಿಗೆ ಹಿರಿತೆರೆಯ ‘ಭಾಗ್ಯದ ಬಾಗಿಲು’ ತೆರೆದಿದೆ. ಕಿರುತೆರೆಯಿಂದ ಹಿರಿತೆರೆಗೆ ತೆರಳಿದ ಅನೇಕ ನಟರು ಇಂದಿಗೂ ಕಿರುತೆರೆಯ ನಂಟು ಉಳಿಸಿಕೊಂಡಿದ್ದಾರೆ. ಆ ಪ್ರಕಾರ ಸ್ಮಾಲ್ ಸ್ಕ್ರೀನ್ ನಿಂದ ಸಿಲ್ವರ್ ಸ್ಕೀನ್ ಗೆ ಜಿಗಿದಿರೋ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದನ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗ್ತಿದೆ.

ಲಕ್ಷ್ಮೀ ಬಾರಮ್ಮ ಮೆಗಾ ಸೀರಿಯಲ್ ನ ಅದ್ಭುತ ನಟನೆಯಿಂದಾಗಿ ನಟ ಚಂದನ್ ‘ಲವ್ ಯು ಆಲಿಯಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ‘ಪ್ರೇಮ ಬರಹ’ ಚಿತ್ರದಲ್ಲೂ ನಾಯಕ ನಟರಾಗಿ ಕಾಣಿಸಿಕೊಂಡಿದ್ದರು.

ಸದ್ಯ ಅವರು ಕನ್ನಡದ ಖಾಸಗಿ ಮನರಂಜನಾ ವಾಹಿನಿಯ ಸರಣಿ ಕಾರ್ಯಕ್ರಮವೊಂದರಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗ್ತಿದೆ. ಈ ಸಂಬಂಧ ಕಾರ್ಯಕ್ರಮದ ತಂಡ ಚಂದನ್ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದೆಯಂತೆ.

ಸರಣಿ ಕಾರ್ಯಕ್ರಮಕ್ಕೆ ಸರ್ವಮಂಗಳ ಮಾಂಗಲ್ಯೇ ಅಂತಾ ಹೆಸರಿಡಲಾಗಿದೆ ಅಂತ ಹೇಳಲಾಗ್ತಿದೆ. ಈ ಕಾರ್ಯಕ್ರಮ ಹಿಂದಿ ಕಾರ್ಯಕ್ರಮವೊಂದರ ರಿಮೇಕ್ ಆಗಿದ್ದು, ಪ್ರೇಮ ಕಥೆ ಆಧಾರಿತ ಸರಣಿ ಸಂಚಿಕೆಗಳಾಗಿರಲಿದೆಯಂತೆ. ಇದರಲ್ಲಿ ಚಂದನ್ ಗಂಭೀರ ಯುವಕನ ಪಾತ್ರವನ್ನ ಪ್ಲೇ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...