alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮೀಯ ಗೆಳೆಯನಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆತನಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಬಿಡುವು ಸಿಕ್ಕಾಗ ಗೆಳೆಯರೊಂದಿಗೆ ಕಾಲ ಕಳೆಯಲು ದರ್ಶನ್ ಬಯಸುತ್ತಾರೆ.

ದರ್ಶನ್ ಅವರ ಆತ್ಮೀಯ ಗೆಳೆಯರ ಬಳಗದಲ್ಲಿ ಸೃಜನ್ ಲೋಕೇಶ್ ಅವರಿಗೆ ವಿಶೇಷ ಸ್ಥಾನವಿದೆ. ಇಬ್ಬರೂ ಬಹು ಕಷ್ಟದಿಂದ ಇಂದು ಉನ್ನತ ಹಂತಕ್ಕೇರಿದ್ದು, ಈಗಲೂ ಅದೇ ಆತ್ಮೀಯತೆಯನ್ನು ಉಳಿಸಿಕೊಂಡಿದ್ದಾರೆ.

ಗುರುವಾರದಂದು ಸೃಜನ್ ಲೋಕೇಶ್ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಆತ್ಮೀಯ ಗೆಳೆಯನಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಸೃಜನ್ ಲೋಕೇಶ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ದರ್ಶನ್ ಕಳುಹಿಸಿದ್ದ ವಿಡಿಯೋವನ್ನು ಪ್ರದರ್ಶಿಸಲಾಗಿದೆ. ಈ ವಿಡಿಯೋ ಕುರಿತು ಖುದ್ದು ಸೃಜನ್ ಲೋಕೇಶ್ ಅವರಿಗೇ ಮಾಹಿತಿ ಇರಲಿಲ್ಲವೆನ್ನಲಾಗಿದ್ದು, ಸೃಜನ್ ಲೋಕೇಶ್ ಅವರ ಸಾಧನೆಯ ಕಿರು ಪರಿಚಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ವಿಡಿಯೋ ಮೂಲಕ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...