alex Certify
ಕನ್ನಡ ದುನಿಯಾ       Mobile App
       

Kannada Duniya

ಜೂನಿಯರ್ ಕಲಾವಿದನ ಮೇಲೆ ದರ್ಶನ್ ಹಲ್ಲೆ ಮಾಡಿದ್ದರೆಂಬ ಪ್ರಕರಣಕ್ಕೆ ಹೊಸ ತಿರುವು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಚಿತ್ರೀಕರಣದ ವೇಳೆ ಸಹ ಕಲಾವಿದನ ಮೇಲೆ ದರ್ಶನ್ ಹಲ್ಲೆ ಮಾಡಿದರೆಂಬ ಪ್ರಕರಣಕ್ಕೆ ಈಗ ಹೊಸ ತಿರುವು ದೊರೆತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಮಾಪಕಿ ಶೈಲಜಾ ಸಿಂಗ್, ಜೂನಿಯರ್ ಕಲಾವಿದನ ಮೇಲೆ ದರ್ಶನ್ ಹಲ್ಲೆ ನಡೆಸಿಲ್ಲ. ಆತ ಹಾಡಿನ ಚಿತ್ರೀಕರಣವನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ದರ್ಶನ್, ಆ ರೀತಿ ಮಾಡಬೇಡ ಎಂದು ತಿಳಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

ಚಿತ್ರಮಂದಿರದಲ್ಲಿ ತೋರಿಸುವ ಸಲುವಾಗಿ ನಾವುಗಳು ಹಾಡಿನ ಚಿತ್ರೀಕರಣ ಮಾಡುತ್ತಿರುತ್ತೇವೆ. ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಬಹಿರಂಗ ಮಾಡಿದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿರುವ ಶೈಲಜಾ ಸಿಂಗ್, ಜೂನಿಯರ್ ಕಲಾವಿದ ಶಿವಶಂಕರ್ ಬೆಳಗಿನಿಂದಲೂ ಇದನ್ನೇ ಮಾಡುತ್ತಿದ್ದ ವೇಳೆ ಚಿತ್ರತಂಡದವರು ಎಚ್ಚರಿಕೆ ನೀಡಿದ್ದರು. ಆದರೂ ಆತ ಅದನ್ನೇ ಮುಂದುವರೆಸಿದಾಗ ನಟ ದರ್ಶನ್ ತಿಳಿ ಹೇಳಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...