alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ನಟ ದರ್ಶನ್ ಕಾರುಗಳ ಆಯುಧ ಪೂಜೆ ಫೋಟೊ

ಈ ಬಾರಿ ಆಯುಧ ಪೂಜೆಯಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದಕ್ಕೆಲ್ಲ ಕಾರಣ ದರ್ಶನ್ ಅವರ ಬಳಿಯಿರುವ ಕಾರಿನ ಸಂಗ್ರಹ. ನಟ ದರ್ಶನ್ ಅವರಿಗೆ ಕಾರುಗಳೆಂದರೆ ತುಂಬಾ ಪ್ರೀತಿ. ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿವೆ.

ಆಯುಧ ಪೂಜೆಯಂದು ದರ್ಶನ್ ಮನೆಮುಂದೆ ಕಾರುಗಳನ್ನು ಸಾಲು ಸಾಲಾಗಿ ಇಟ್ಟು ಪೂಜೆ ಮಾಡಲಾಗಿದೆ. ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೇಂಜ್ ರೋವರ್, ಫೋರ್ಡ್ ಮಸ್ಟಂಗ್ ಜತೆಗೆ ಇತ್ತೀಚೆಗೆ ಖರೀದಿ ಮಾಡಿದ ಲ್ಯಾಂಬೋರ್ಗಿನಿ ಕಾರು ಕೂಡ ಪೂಜೆಗಾಗಿ ದರ್ಶನ್ ಮನೆಮುಂದೆ ಸಾಲು ಸಾಲಾಗಿ ನಿಂತಿದ್ದವು.

ಇವು ಅಭಿಮಾನಿಗಳ ಕಣ್ಣಿಗಂತೂ ಹಬ್ಬದೂಟವನ್ನೇ ಉಣಬಡಿಸಿದ್ದವು. ಕಾರುಗಳಿಗೆಲ್ಲಾ ಪೂಜೆ ಆದ ನಂತರ ತಮ್ಮ ನೆಚ್ಚಿನ ನಟನ ಕಾರಿನ ಮುಂದೆ ನಿಂತು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಕಾರುಗಳ ಫೋಟೊ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...