alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ದರ್ಶನ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ: ಕೈಗೆ ಚುಚ್ಚಿಕೊಂಡಿದ್ದ ಬಳೆ ತುಂಡು ಹೊರ ತೆಗೆದ ವೈದ್ಯರು

ಮೈಸೂರು: ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರಿನ ಹೊರವಲಯದ ಹಿನ​ಕಲ್ ರಿಂಗ್ ರೋಡ್​ ಬಳಿ ದರ್ಶನ್ ಅವರ ಕಾರು ಇಂದು ನಸುಕಿನ ಜಾವ ಅಪಘಾತಕ್ಕೀಡಾಗಿದ್ದು, ನಟ ದರ್ಶನ್, ಪ್ರಜ್ವಲ್, ದೇವರಾಜ್ ಅವರಿಗೆ ಗಾಯಗಳಾಗಿತ್ತು. ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಇವರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ದರ್ಶನ್ ಬಲಗೈ ಮೂಳೆ ಮುರಿದಿದೆ. ದರ್ಶನ್ ಕೈಯ್ಯಲ್ಲಿದ್ದ ಬಳೆ ತುಂಡಾಗಿ, ಬಳೆ ಚೂರು ದರ್ಶನ್ ಅವರ ಬಲಗೈನ ಮೊಣಕೈಗೆ ಚುಚ್ಚಿಕೊಂಡಿತ್ತು. ಇದರಿಂದ ರಕ್ತಸ್ರಾವವಾಗುತ್ತಿತ್ತು ಎನ್ನಲಾಗಿದೆ. ಸಧ್ಯ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ, ಕೈಗೆ ಚುಚ್ಚಿಕೊಂಡಿದ್ದ ಬಳೆ ತುಂಡನ್ನು ಹೊರತೆಗೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನು ಆಸ್ಪತ್ರೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...