alex Certify
ಕನ್ನಡ ದುನಿಯಾ       Mobile App
       

Kannada Duniya

8 ವರ್ಷಗಳ ಬಳಿಕ ಬಹಿರಂಗವಾಯ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದ ಈ ಕಾರ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಮ್ಮ ಸರಳ ಹಾಗೂ ನೇರ ನಡೆ-ನುಡಿಗಳಿಂದಲೇ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದರಲ್ಲೂ ದರ್ಶನ್ ಅವರದ್ದು ಎತ್ತಿದ ಕೈ. ಇದಕ್ಕೆ ಉದಾರಣೆ ಎಂಟು ವರ್ಷಗಳ ಬಳಿಕ ಬಹಿರಂಗವಾಗಿರುವ ಈ ಘಟನೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಈ ಘಟನೆ ಕುರಿತು ಬರೆದಿದ್ದಾರಲ್ಲದೇ ದರ್ಶನ್ ‘ದೇವರಂಥ ಮನುಷ್ಯ’ ಎಂದು ಬಣ್ಣಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಮಾಡಿದ್ದೇನು ಅಂತೀರಾ? ಮುಂದೆ ಓದಿ.

ಇದು ಅಶ್ವತ್ ರವರು ತೀರಿಕೊಂಡ ದಿನ ನಡೆದ ಘಟನೆ. ಅಂದು ಬೆಂಗಳೂರಿನಲ್ಲಿದ್ದ ದರ್ಶನ್, ಹಿರಿಯ ನಟ ಅಶ್ವಥ್ ರ ಅಂತಿಮ ದರ್ಶನಕ್ಕಾಗಿ ಧಾವಿಸಿ ಬಂದಿದ್ದರು. ಆ ಸಂದರ್ಭದಲ್ಲಿ ಯಾರಿಗೂ ಗೊತ್ತಾಗದಂತೆ ತಮ್ಮ ಕಿಸೆಯಲ್ಲಿದ್ದ ಹಣವನ್ನು ಶಂಕರ್ ಅಶ್ವಥ್ ಅವರಿಗೆ ನೀಡಿದ್ದರು. ಇದು ಸ್ವತಃ ಶಂಕರ್ ಅಶ್ವಥ್ ರ ಗಮನಕ್ಕೂ ಬಂದಿರಲಿಲ್ಲ.

ಹಿರಿಯರು ಮನೆಯಲ್ಲಿ ತೀರಿಕೊಂಡಾಗ ತಕ್ಷಣವೇ ಕೈಕಾಲುಗಳು ಓಡಾಡುವುದಿಲ್ಲ. ಅದಕ್ಕೆ ಅನೇಕ ಕಾರಣಗಳು ಸಮಸ್ಯೆಗಳು ಇರುತ್ತವೆ. ಅದರಲ್ಲಿ ಎಷ್ಟೋ ಬಡವರ ಮನೆಯಲ್ಲಿ ಹಣದ ಮುಗ್ಗಟ್ಟು ಬಹಳವಾಗಿ ಇರುತ್ತದೆ. ಅದರ ಬಗ್ಗೆ ಹಲವರು ಹೆಚ್ಚು ಗಮನ ಕೊಡುವುದಿಲ್ಲ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಶಂಕರ್ ಅಶ್ವಥ್, ಇಂತಹ ಸಂದರ್ಭದಲ್ಲಿ ದರ್ಶನ್ ಹಣ ಕೊಟ್ಟಿದ್ದರೆಂಬುದನ್ನು ಸ್ಮರಿಸಿಕೊಂಡಿದ್ದಾರೆ.

ದರ್ಶನ್ ಅಂದು ಹಣ ಕೊಟ್ಟಿದ್ದು ಬಹಳ ದಿನಗಳ ನಂತರ ವಿಡಿಯೋ ನೋಡಿದಾಗಲೇ ಶಂಕರ್ ಅಶ್ವತ್ ರಿಗೆ ತಿಳಿದುಬಂದಿದೆ. ಈ ಕುರಿತು ದರ್ಶನ್ ಅವರ ಬಳಿ ಒಮ್ಮೆ ಕೇಳಿದಾಗ ಮೊದಲು ಹೇಳಲು ಹಿಂಜರಿದರೂ ನಂತರ ಶಂಕರ್ ಅಶ್ವಥ್ ರ ಬಲವಂತಕ್ಕೆ ಮಣಿದು, ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ರ ಕಡೆಗಾಲದಲ್ಲಿ ನೋಡಲು ಹೆಚ್ಚು ಬಂದಿದ್ದು ಅಶ್ವತ್ಥ್ ಅಂಕಲ್. ಆ ಋಣ ತೀರಿಸಲು….. ಎಂದು ಹೇಳಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...