alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚೆಬ್ಬಿಸಿದೆ ದರ್ಶನ್ ‘ಚಕ್ರವರ್ತಿ’ ಸಾಂಗ್

dar-chakr

‘ನೋಡೋ ಕತ್ತು ಎತ್ತಿ, ಎಷ್ಟು ಹೊತ್ತು ನೋಡ್ತಿ, ಎತ್ತೋ ಎತ್ತೋ ಆರ್ತಿ, ಬಂದ ಚಕ್ರವರ್ತಿ’ ಎಂದು ಆರಂಭವಾಗುವ ‘ಚಕ್ರವರ್ತಿ’ ಚಿತ್ರದ ಟೈಟಲ್ ಸಾಂಗ್ ಯುಟ್ಯೂಬ್ ನಲ್ಲಿ ದಾಖಲೆ ಬರೆದಿದೆ.

ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ ‘ಚಕ್ರವರ್ತಿ’ ಚಿತ್ರವನ್ನು ಚಿಂತನ್ ನಿರ್ದೇಶಿಸಿದ್ದು, ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಗೂ ಆನಂದ್ ಆಡಿಯೋ ಹೊರ ತಂದಿರುವ ‘ಚಕ್ರವರ್ತಿ’ ಚಿತ್ರದ ಈ ಸಾಂಗ್ ಜನವರಿ 10 ರಂದು ಅಪ್ ಲೋಡ್ ಆಗಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಒಂದೇ ಹಾಡಿನಿಂದಲೇ ಚಿತ್ರಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಟೈಟಲ್ ಸಾಂಗ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇದೇ ತಿಂಗಳಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಫೆಬ್ರವರಿಯಲ್ಲಿ ‘ಚಕ್ರವರ್ತಿ’ ‘ದರ್ಶನ’ವಾಗಲಿದೆ.

80 ರ ದಶಕದ ಕಥಾಹಂದರ ಹೊಂದಿರುವ ಚಿತ್ರದಲ್ಲಿ ದರ್ಶನ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೇಶ, ವಿದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿನ ದರ್ಶನ್ ಹೇರ್ ಸ್ಟೈಲ್ ಸಖತ್ ಸ್ಟೈಲಿಶ್ ಆಗಿದೆ. ದರ್ಶನ್ 2 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಅವರೊಂದಿಗೆ ಆದಿತ್ಯ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ ಮೊದಲಾದವರು ಅಭಿನಯಿಸಿದ್ದಾರೆ. ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ ಚಕ್ರವರ್ತಿ’.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...