alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸಚಿವೆ ಸ್ಮೃತಿ ಇರಾನಿಗೂ ದೀಪಿ-ರಣವೀರ್ ಮದುವೆ ಚಿಂತೆ…!

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ನವೆಂಬರ್ 14ರಂದು ಕೊಂಕಣಿ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇಂದು ಸಿಂಧಿ ಪದ್ಧತಿಯಲ್ಲಿ ಮದುವೆ ನಡೆಯಲಿದೆ.

ಇಟಲಿಯಲ್ಲಿ ವಿವಾಹ ಸಮಾರಂಭ ನಡೆಯುತ್ತಿದೆ. ದೀಪಿಕಾ-ರಣವೀರ್ ಮದುವೆ ಫೋಟೋ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈವರೆಗೂ ಜೋಡಿಯ ಒಂದೇ ಒಂದು ಫೋಟೋ ವೈರಲ್ ಆಗಿಲ್ಲ.

ದೀಪಿ-ರಣವೀರ್ ಜೋಡಿಯನ್ನು ಮದುವೆ ಉಡುಗೆಯಲ್ಲಿ ನೋಡಲು ಅಭಿಮಾನಿಗಳು ಮಾತ್ರವಲ್ಲ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಕೂಡ ಉತ್ಸುಕರಾಗಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಇದಕ್ಕೆ ಸಂಬಂಧಿಸಿದ ತಮಾಷೆ ಪೋಸ್ಟ್ ಒಂದನ್ನು ಸ್ಮೃತಿ ಹಾಕಿದ್ದಾರೆ. ಅಸ್ತಿಪಂಜರವೊಂದು ಬೆಂಚ್ ಮೇಲೆ ಕುಳಿತ ಫೋಟೋ ಹಾಕಿರುವ ಸ್ಮೃತಿ ಇರಾನಿ, ದೀಪಿಕಾ-ರಣವೀರ್ ಮದುವೆ ಫೋಟೋಗೆ ತುಂಬಾ ಸಮಯದಿಂದ ಕಾಯುತ್ತಿದ್ದೀರಾ..! ಎಂದಿದ್ದಾರೆ.

ಸ್ಮೃತಿ ಇರಾನಿ ಈ ಪೋಸ್ಟ್ ಗೆ ಈವರೆಗೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡ್ರೆ ಮತ್ತೆ ಕೆಲವರು ಮದುವೆ ವಿಷ್ಯ ಬಿಟ್ಟು ದೇಶದ ಬಗ್ಗೆ ಚಿಂತೆ ಮಾಡಿ ಎಂದಿದ್ದಾರೆ. ಈ ಮಧ್ಯೆ ರಣವೀರ್ ಫೋಟೋ ಒಂದು ವೈರಲ್ ಆಗಿದೆ. ರಣವೀರ್ ಗೋಲ್ಡನ್ ಕಲರ್ ಶೇರ್ವಾನಿಯಲ್ಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...