alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕಪ್ ಇಲ್ಲದೆ ಹೇಗೆ ಕಾಣಿಸ್ತಾರೆ ಈ ನಟಿಯರು…?

ಸೆಲೆಬ್ರಿಟಿಗಳು ಯಾವತ್ತೂ ಮೇಕಪ್ ಇಲ್ಲದೆಯೇ ಹೊರಗೆ ಬರೋದೇ ಇಲ್ಲ. ಬಹುತೇಕರು ಮೇಕಪ್ ಇಲ್ಲದೇ ಬಂದರೆ ಗುರುತೂ ಸಿಗೋದಿಲ್ಲ ಬಿಡಿ. ಆದರೆ ಕೆಲವರು ಮಾತ್ರ ಮೇಕಪ್ ಇಲ್ಲದೇ ಬಂದರೂ ಅಷ್ಟೇನೂ ವ್ಯತ್ಯಾಸ ಕಾಣಿಸೋದಿಲ್ಲ. ಇತ್ತೀಚಿಗೆ ಕೆಲ ಸೆಲೆಬ್ರಿಟಿಗಳು ಮೇಕಪ್ ಇಲ್ಲದೆಯೂ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಕರೀನಾ ಕಪೂರ್ ಸಹಜ ಸೌಂದರ್ಯ ಮೇಕಪ್ ಇಲ್ಲದೆಯೂ ಆಕರ್ಷಕವಾಗಿ ಕಾಣಿಸೋ ನಟಿ. ಈಕೆಯ ಸ್ಮೋಕಿ ಐಸ್ ಎಲ್ಲರನ್ನೂ ಸೆಳೆಯುತ್ತೆ.

ಕಿಮ್ ಕರ್ದಾಶಿಯನ್ ವೆಸ್ಟ್ ತನ್ನ ಸ್ವಾಭಾವಿಕ ಸೌಂದರ್ಯದಿಂದಲೇ ಪ್ರೇಕ್ಷಕರ ಮನಸೆಳೆದವರು. ಸರಳ ಸೌಂದರ್ಯ, ಬಣ್ಣ, ಆಕರ್ಷಕ ಕಣ್ಣುಗಳಿಂದ ಕಿಮ್ ಆಕರ್ಷಕವೆನಿಸುತ್ತಾರೆ.

ಇನ್ನು ಆಲಿಯಾ ಭಟ್ ತನ್ನ ಆಕರ್ಷಕ ಉಡುಗೆ ತೊಡುಗೆಯಿಂದಲೇ ಗಮನ ಸೆಳೆಯುತ್ತಾರೆ. ಸಹಜ ಬ್ಯೂಟಿ ಆಲಿಯಾ ಫ್ರೆಶ್ ಮುಖ ಹಾಗೂ ನಗು ಮೇಕಪ್ ಇಲ್ಲದೆಯೂ ಮನಸೂರೆಗೊಳ್ಳುತ್ತೆ. 

ಹಾಲಿವುಡ್ ಬ್ಯೂಟಿ ಹಿಲರಿ ಸ್ವಾಂಕ್  ಮೇಕಪ್ ಇಲ್ಲದೆಯೂ ಫ್ರೆಶ್ ಸ್ಕಿನ್, ಗ್ಲೋಸಿ ಲಿಪ್ಸ್ ಹಾಗೂ ಚಂದದ ಹುಬ್ಬುಗಳಿಂದಲೇ ನೋಡುಗರನ್ನು ಸೆಳೆಯುತ್ತಾರೆ.

ಇನ್ನು ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಸಹಜ ಸೌಂದರ್ಯವತಿ. ಮೇಕಪ್ ಇಲ್ಲದೆಯೂ ಆಕೆಯ ಸೌಂದರ್ಯ ಕುಂದೋದಿಲ್ಲ.

ಸಿಂಪಲ್ ಬ್ಯೂಟಿ ಸೆಲೆನಾ ಗೋಮ್ಜ್ ಸೌಂದರ್ಯ ಕೂಡ ಮೇಕಪ್ ಇಲ್ಲದೆಯೂ ಮನಸೆಳೆಯುತ್ತೆ. ಸೆಲೆನಾ ಹೊಳಪಿನ ತ್ವಚೆ ಹಾಗೂ ಬಣ್ಣದ ತುಟಿಗಳು ಆಕೆಯ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣುತ್ತದೆ.

ಬಾಲಿವುಡ್ ನ ಕ್ಯೂಟ್ ಕತ್ರೀನಾ ಕೈಫ್ ಕೂಡಾ ನೈಜ ಸೌಂದರ್ಯವತಿ. ಮೇಕಪ್ ಇದ್ದರೂ ಇಲ್ಲದೆಯೂ ಆಕೆಯ ಸೌಂದರ್ಯ ಒಂದಿಂಚೂ ಮಾಸುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...