alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ರು ಈ ಬಾಲಿವುಡ್ ಸ್ಟಾರ್ಸ್

2018 ರ ಆರಂಭವೇ ಅತ್ಯಂತ ಕುತೂಹಲಕಾರಿಯಾಗಿದೆ. ಶಾರುಖ್ ಅಭಿನಯದ ಝೀರೋ ಚಿತ್ರದ ಟೀಸರ್, ಕರೀನಾ ಬಿಕಿನಿ ಫೋಟೋ ಶೂಟ್ ಎಲ್ಲಕ್ಕಿಂತ್ಲೂ ಹೆಚ್ಚಾಗಿ ಸುದ್ದಿ ಮಾಡ್ತಿರೋದು ಹೈದ್ರಾಬಾದ್ ನ ಸಂಗೀತ್ ಕುಮಾರ್ ಎಂಬ ಯುವಕ.

ತಾನು ನಟಿ ಐಶ್ವರ್ಯಾ ರೈ ಮಗ ಎನ್ನುತ್ತಿದ್ದಾನೆ ಈತ. ಲಂಡನ್ ನಲ್ಲಿ ಐವಿಎಫ್ ಮೂಲಕ ಜನಿಸಿದ್ದೇನೆ ಅಂತಾ ಹೇಳಿಕೊಳ್ತಿದ್ದಾನೆ. ಅವನು ಹೇಳೋ ಪ್ರಕಾರ ಐಶ್ವರ್ಯಾಗೆ ಆಗ ಕೇವಲ 14 ವರ್ಷ. ಕುಟುಂಬದವರು ತನ್ನನ್ನು ತಾಯಿಯಿಂದ ದೂರ ಮಾಡಿದ್ದಾರೆ ಅಂತಾ ಅಲವತ್ತುಕೊಳ್ತಿದ್ದಾನೆ.

ಇಂತಹ ವಿಚಿತ್ರ ಆರೋಪಗಳು ಕೇಳಿ ಬಂದಿರೋದು ಕೇವಲ ಐಶ್ವರ್ಯಾ ರೈ ಬಗ್ಗೆ ಮಾತ್ರವಲ್ಲ. ಸೆಲೆಬ್ರಿಟಿಗಳ ಬಗ್ಗೆ ಕೇಳಿ ಬಂದ ಚಿತ್ರವಿಚಿತ್ರ ಸಂಗತಿಗಳನ್ನು ನೋಡಿದ್ರೆ ನಿಮಗೆ ಮಾತೇ ಹೊರಡೋದಿಲ್ಲ.

ಶಾಹಿದ್ ಕಪೂರ್ : 2012 ವಾಸ್ತವಿಕಾ ಪಂಡಿತ್ ಎಂಬಾಕೆ ನಟ ಶಾಹಿದ್ ಕಪೂರ್ ಹಿಂದೆ ಬಿದ್ದಿದ್ಲು. ಈಕೆ ಹಿಂದಿಯ ಖ್ಯಾತ ನಟ ರಾಜ್ ಕುಮಾರ್ ಮಗಳು ಅಂತಾನೂ ಹೇಳಲಾಗುತ್ತದೆ. ತಾನು ಶಾಹಿದ್ ಕಪೂರ್ ಪತ್ನಿ ಅಂತಾ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ಲು. ಅವಳ ಕಾಟ ತಾಳಲಾರದೆ ಕೊನೆಗೆ ಶಾಹಿದ್ ಎಫ್ ಐ ಆರ್ ದಾಖಲಿಸಿದ್ರು. ಅದಾದ್ಮೇಲೆ ವಾಸ್ತವಿಕಾ ಯಾರ ಕಣ್ಣಿಗೂ ಬಿದ್ದಿಲ್ಲ.

ಶಾರುಖ್ ಖಾನ್ : 90ರ ದಶಕದಲ್ಲಿ ಶಾರುಖ್ ಖಾನ್ ಗೆ ಸೂಪರ್ ಸ್ಟಾರ್ ಪಟ್ಟ ಸಿಕ್ಕಿತ್ತು. ಆ ಸಮಯದಲ್ಲಿ ಮಲನ್ಬಾಯಿ ಎಂಬ ಮಹಿಳೆ ತಾನು ಶಾರುಖ್ ರ ನಿಜವಾದ ತಾಯಿ ಅಂತಾ ಕೋರ್ಟ್ ಮೆಟ್ಟಿಲೇರಿದ್ಲು. ನ್ಯಾಯಾಲಯ ಶಾರುಖ್ ಗೆ ಸಮನ್ಸ್ ಕೂಡ ನೀಡಿತ್ತು. ಕಳೆದ ವರ್ಷದವರೆಗೂ ಈ ಪ್ರಕರಣ ವಿಚಾರಣೆಯ ಹಂತದಲ್ಲಿತ್ತು. ನಂತರ ಕೋರ್ಟ್ ವಿಚಾರಣೆಯನ್ನು ನಿಲ್ಲಿಸಿದೆ.

ಧನುಷ್ : ನಟ ರಜನೀಕಾಂತ್ ರ ಅಳಿಯ ಧನುಷ್ ಕೂಡ ಇಂಥದ್ದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಿಳುನಾಡಿನ ದಂಪತಿ ಧನುಷ್ ತಮ್ಮ ಮಗನೆಂದು ದಾವೆ ಹೂಡಿದ್ದರು. ಜೀವನ ನಿರ್ವಹಣೆಗೆ ಹಣ ಕೇಳಿದ್ದರು. ಆದ್ರೆ ಡಿ ಎನ್ ಎ ಪರೀಕ್ಷೆಯಲ್ಲಿ ದಂಪತಿಯ ಆರೋಪ ಸುಳ್ಳು ಅಂತಾ ಸಾಬೀತಾಗಿದೆ.

ಅಭಿಷೇಕ್ ಬಚ್ಚನ್ : ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮದುವೆ ಸಂಭ್ರಮದಲ್ಲಿದ್ದಾಗ, ಜಾಹ್ನವಿ ಕಪೂರ್ ಎಂಬ ನಟಿ ತಾನು ಜೂನಿಯರ್ ಬಚ್ಚನ್ ರ ಮೊದಲ ಪತ್ನಿ ಅಂತಾ ಹೇಳಿಕೊಂಡಿದ್ಲು. ದಸ್ ಚಿತ್ರದಲ್ಲಿ ಆಕೆ ಹಿನ್ನೆಲೆ ನೃತ್ಯಗಾತಿಯಾಗಿದ್ದಳು. ನಾವಿಬ್ಬರೂ ಆಗ ಗುಟ್ಟಾಗಿ ಮದುವೆಯಾಗಿದ್ದೇವೆ ಎಂದಿದ್ಲು. ಆದ್ರೆ ಅಭಿಷೇಕ್ ಇದನ್ನು ನಿರಾಕರಿಸಿದ್ರು.

ಕಂಗನಾ ರನಾವತ್ : 2010ರಲ್ಲಿ ಆಕಾಶ್ ಭಾರದ್ವಾಜ್ ಎಂಬಾತ ನಟಿ ಕಂಗನಾ ರನಾವತ್ ಹಿಂದೆ ಬಿದ್ದಿದ್ದ. ಹತ್ತಾರು ಪ್ರೇಮ ಪತ್ರಗಳನ್ನು ಕಂಗನಾಗೆ ಕಳಿಸಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...