alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ ಮಸಾಜ್ ಗಾಗಿ ತಿಂಗಳಿಗೆ 75 ಸಾವಿರ ರೂ. ನೀಡ್ತಿದ್ದ ನಿರ್ಮಾಪಕಿ ವಿರುದ್ಧ ಕೇಸ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ, ರುಸ್ತಮ್, ಪ್ಯಾಡ್ ಮೆನ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಪ್ರೇರಣಾ ಅರೋರಾ ವಿವಾದದಲ್ಲಿ ಸಿಲುಕಿದ್ದಾರೆ. ನ್ಯೂಕ್ಲಿಯರ್ ಹಾಗೂ ಕೇದಾರನಾಥ ಚಿತ್ರದ ಚಿತ್ರೀಕರಣ ನಿಂತ ನಂತ್ರ ಅವ್ರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪ್ರೇರಣಾ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿದೆ.

ಪ್ರೇರಣಾ ವಿರುದ್ಧ ಖೈರುನ್ ಮುಖ್ತಾರ್ ಅಹ್ಮದ್ ಹೆಸರಿನ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಪ್ರೇರಣಾ ತಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾರೆಂದು ಮಹಿಳೆ ಮೆಡ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರೇರಣಾ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ.

ಮಹಿಳೆಯನ್ನು ಪ್ರೇರಣಾ ಮಾಲಿಶ್ ಕೆಲಸಕ್ಕಿಟ್ಟುಕೊಂಡಿದ್ದರಂತೆ. ರಾತ್ರಿಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೆಲಸ ಮಾಡಬೇಕಿತ್ತಂತೆ. ಸುಮಾರು 10 ವರ್ಷದಿಂದ ಮಹಿಳೆ ಕೆಲಸಕ್ಕಿದ್ದಳಂತೆ. ತಿಂಗಳಿಗೆ 75 ಸಾವಿರ ರೂಪಾಯಿ ಸಂಬಳ ನಿಗಧಿಯಾಗಿತ್ತಂತೆ.

ಕಳೆದ ಕೆಲ ತಿಂಗಳಿಂದ ಪ್ರೇರಣಾ ಸಂಬಳ ನೀಡಿಲ್ಲವಂತೆ. 1.25 ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆಯಂತೆ. 3.25 ಲಕ್ಷ ರೂಪಾಯಿ ಪ್ರೇರಣಾ ನನಗೆ ನೀಡಬೇಕೆಂದು ಮಹಿಳೆ ಹೇಳ್ತಿದ್ದಾಳೆ. ಹಣ ನೀಡುವಂತೆ ಕೇಳಿದ್ರೆ ಪ್ರೇರಣಾ ಹಲ್ಲೆ ನಡೆಸಿ, ಕೆಟ್ಟ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರಂತೆ. ಆದ್ರೆ ಈ ಆರೋಪವನ್ನು ಪ್ರೇರಣಾ ತಳ್ಳಿಹಾಕಿದ್ದಾರೆ. 56 ಸಾವಿರ ರೂಪಾಯಿ ಕಳ್ಳತನ ಮಾಡಿ ಮಹಿಳೆ ಸಿಕ್ಕಿಬಿದ್ದಿದ್ದಳು. ಬಾಡಿಗಾರ್ಡ್ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದರು. ಆ ನಂತ್ರ ಮಹಿಳೆ ಆರೋಪ ಮಾಡ್ತಿದ್ದಾಳೆ. ಆಕೆ ಬಳಿ ದಾಖಲೆಗಳಿದ್ದರೆ ಆಕೆ ಹಣ ತೀರಿಸುತ್ತೇನೆಂದು ಪ್ರೇರಣಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...