alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಡಾನ್ಸ್ ಮಾಡಿ ‘ಸಂಕಷ್ಟ’ಕ್ಕೆ ಸಿಲುಕಿದ್ರು ನಿವೇದಿತಾ ಗೌಡ

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಕಿಕಿ ಡಾನ್ಸ್ ಮಾಡಿ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟ್ ಆದ ಒಂದೇ ದಿನದಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದರು.

ಅಪಾಯಕಾರಿ ಕಿಕಿ ಡಾನ್ಸ್ ಮಾಡಿರುವುದಕ್ಕೆ ಹಲವರು, ನಿವೇದಿತಾ ಗೌಡರನ್ನು ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ನಿವೇದಿತಾ ಗೌಡ ತಾವು ಅಪ್ಲೋಡ್ ಮಾಡಿದ ವಿಡಿಯೋವನ್ನು ಮಾಡಿದ್ದರು.

ವಿಡಿಯೋ ಡಿಲೀಟ್ ಆಗಿದ್ದರೂ ನಿವೇದಿತಾ ಗೌಡರ ಸಂಕಷ್ಟ ಮಾತ್ರ ತಪ್ಪಿಲ್ಲ. ಕನ್ನಡ ಒಕ್ಕೂಟ ಸಂಘಟನೆಯ ನಾಗೇಶ್ ಎಂಬವರು ನಿವೇದಿತಾ ಗೌಡ ಅಪಾಯಕಾರಿ ಕಿಕಿ ಡಾನ್ಸ್ ಮಾಡುವ ಮೂಲಕ ಪ್ರಚೋದಿಸಿದ್ದಾರೆ ಎಂದು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...