alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಅಮಲಿನಲ್ಲಿ ಅಪಘಾತವೆಸಗಿದನಾ ನಟ ವಿಕ್ರಮ್ ಪುತ್ರ?

ಚೆನ್ನೈ: ತಮಿಳು ನಟ ವಿಕ್ರಂ ಅವರ ಪುತ್ರನ ಕಾರಿನ ವೇಗಕ್ಕೆ ಆಟೋ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ವಿಕ್ರಂ ಪುತ್ರ ಧ್ರುವ್‌ ಅಲ್ವಾರ್‌ಪೇಟೆಯ ಟಿಟಿಕೆ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಈ ವೇಳೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಆಟೋಗೆ ಗುದ್ದಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಮೂರು ಆಟೋಗಳು ಜಖಂಗೊಂಡಿವೆ.

ಗಾಯಗೊಂಡಿರುವವನನ್ನು ಆಟೋ ಚಾಲಕ ಕಾಮೇಶ್‌ ಎಂದು ಗುರುತಿಸಲಾಗಿದೆ. ಕಾಮೇಶ್‌ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು, ಧ್ರುವ್‌ನನ್ನು ಬಂಧಿಸಿದ್ದಾರೆ. ಆದರೆ ಬಳಿಕ ಆತನನ್ನು ಜಾಮೀನಿನ ಮೇಲೆ  ಬಿಡುಗಡೆ ಮಾಡಿದ್ದಾರೆ.

ಕಾರು ಚಲಾವಣೆ ವೇಳೆ ಮದ್ಯಪಾನ ಮಾಡಿದ್ದ ಕುರಿತು ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಪ್ರತಿಕ್ರಿಯೆ ನೀಡಿಲ್ಲ. ಆದರೆ ಧ್ರುವ್‌ನನ್ನು ಬಂಧಿಸುವ ವೇಳೆ ಆತನ ಸ್ನೇಹಿತರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಾಲ  ಅವರ ನಿರ್ದೇಶನದಲ್ಲಿ ಧ್ರುವ್‌ ಅವರು ವರ್ಮ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ 2017 ರಲ್ಲಿ ಬಿಡುಗಡೆಯಾದ ಅರ್ಜುನ್‌ ರೆಡ್ಡಿ ಸಿನಿಮಾದ ರಿಮೇಕ್‌ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...