alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಬೆಲೆಯ ಕಾರಿನ ಒಡೆಯ ‘ಬಾಹುಬಲಿ’ ಪ್ರಭಾಸ್

prabhas mn

ತಮಿಳು ಹಾಗೂ ತೆಲುಗು ನಟರ ಬಳಿ ಯಾವೆಲ್ಲಾ ಕಾರ್ ಗಳಿವೆ ಎಂಬುದನ್ನು ತಿಳಿಯುವ ಕುತೂಹಲವೇ. ಈ ನಟರುಗಳು ಹೊಂದಿರುವ ದುಬಾರಿ ಬೆಲೆಯ ಕಾರ್ ಗಳ ಮಾಹಿತಿ ಇಲ್ಲಿದೆ ನೋಡಿ. ಸ್ಟಾರ್ ಗಳೆಂದ ಮೇಲೆ ಅವರ ಲೈಫ್ ಸ್ಟೈಲ್ ಕೂಡ ಭಿನ್ನವಾಗಿರುತ್ತದೆ. ಅದರಲ್ಲೂ ಕಾರಿನ ಕ್ರೇಜ್ ಜಾಸ್ತಿಯೇ ಇರುತ್ತದೆ.

ಸೌತ್ ಇಂಡಿಯಾ ಸ್ಟಾರ್ ಗಳಲ್ಲಿ ದುಬಾರಿ ಬೆಲೆಯ ಕಾರನ್ನು ಹೊಂದಿರುವವರಲ್ಲಿ ‘ಬಾಹುಬಲಿ’ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬಳಿ ಬರೋಬ್ಬರಿ 8 ಕೋಟಿ ರೂ ಬೆಲೆಯ ರೋಲ್ಸ್ ರಾಯ್ಸ್ ಕಂಪನಿಯ ಐಷಾರಾಮಿ ಕಾರು ಇದೆ. ರವಿತೇಜ ಬಳಿ ಹಲವು ಕಾರುಗಳಿದ್ದು, ಅವುಗಳಲ್ಲಿ 5.80 ಕೋಟಿ ರೂ ಮೌಲ್ಯದ ಆಸ್ಟಿನ್ ಮಾರ್ಟಿನ್ ಡಿ-8 ಕಾರು ಒಂದಾಗಿದೆ. ಕಮಲ್ ಹಾಸನ್ ಬಳಿ 3 ಕೋಟಿ ರೂ ಮೌಲ್ಯದ ಹಮ್ಮರ್ ಹೆಚ್-3 ಕಾರಿದೆ, ವಿಜಯ್ ಬಳಿ 3 ಕೋಟಿ ರೂ ಬೆಲೆಯ ರೋಲ್ಸ್ ರಾಯ್ಸ್ ಕಂಪನಿಯ ಕಾರಿದೆ.

ಚಿರಂಜೀವಿ 3 ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರಿನ ಮಾಲೀಕರಾಗಿದ್ದಾರೆ. ಜೂನಿಯರ್ ಎನ್ ಟಿ ಆರ್ 2.5 ಕೋಟಿ ರೂ ಮೊತ್ತದ ಕಾರನ್ನು ಹೊಂದಿದ್ದರೆ, ವಿಕ್ರಂ ಬಳಿ 2 ಕೋಟಿ ಮೊತ್ತದ ಆಡಿ ಕಾರು ಇದೆ. ಇನ್ನು ಧನುಷ್ ಅವರು 1.70 ಕೋಟಿ ರೂ. ಬೆಲೆಯ ಕಾರನ್ನು ಬಳಸಿದರೆ, ಸೂರ್ಯ ಅವರ ಬಳಿ ರೂ.70 ಲಕ್ಷ ಮೌಲ್ಯದ ಕಾರು ಇದೆ, ಅಜಿತ್ ಬಳಿ 2.30 ಕೋಟಿ ರೂ.ನ ಬಿಎಂಡಬ್ಲ್ಯೂ -ಐ8 ಕಾರು ಇದ್ದರೆ, ಮಹೇಶ್ ಬಾಬು ಬಳಿ 2 ಕೋಟಿ ರೂ ಬೆಲೆಯ ರೇಂಜ್ ರೋವರ್ ಕಾರಿದೆ.

ಬಾಲಕೃಷ್ಣ ಅವರು 1.5 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಕಾರಿನಲ್ಲಿ ಓಡಾಡಿದರೆ, ಅಲ್ಲು ಅರ್ಜುನ್ ಅವರು 1 ಕೋಟಿ ರೂ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಹೊಂದಿದ್ದಾರೆ. ಪವನ್ ಕಲ್ಯಾಣ್ ಬಳಿ 95 ಲಕ್ಷ ರೂ. ಬೆಲೆ ಆಡಿ ಕ್ಯೂ-7 ಕಾರಿದೆ. ಈ ದುಬಾರಿ ಬೆಲೆಯ ಕಾರುಗಳ ಜೊತೆಗೆ ಹಲವು ಐಷಾರಾಮಿ ಕಾರುಗಳನ್ನು ಸಹ ಬಹುತೇಕ ನಟರು ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...