alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆಬೆತ್ತಲಾಗಿದ್ದ ನಟಿಗೆ ಬಿಗ್ ಶಾಕ್.…!

ತೆಲುಗು ಫಿಲ್ಮ್ ಚೇಂಬರ್ ಕಚೇರಿ ಎದುರು ಇತ್ತೀಚೆಗಷ್ಟೇ ನಟಿ ಶ್ರೀ ರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ, ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ಅವಕಾಶ ಬೇಕೆಂದ್ರೇ ಮಂಚವೇರಬೇಕೆಂದು ಆರೋಪಿಸಿ, ಶ್ರೀ ರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದು, ಭಾರೀ ಸುದ್ದಿಯಾಗಿತ್ತು. ತೆಲುಗು ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರ ಕುರಿತಾಗಿ ಶ್ರೀ ರೆಡ್ಡಿ ಗಂಭೀರ ಆರೋಪ ಮಾಡಿದ್ದರು.

ಇದೆಲ್ಲಾ ಕಾರಣದಿಂದ ಶ್ರೀ ರೆಡ್ಡಿ ಅವರಿಗೆ ಸದಸ್ಯತ್ವ ನೀಡದಿರಲು ಮೂವಿ ಆರ್ಟಿಸ್ಟ್ ಅಸೋಸಿಯೇಷನ್(MAA–ಮಾ) ತೀರ್ಮಾನಿಸಿದೆ. ಶ್ರೀ ರೆಡ್ಡಿ ಅವರು, ಸಂಸ್ಥೆಯ ಕಚೇರಿ ಎದುರು ದುರ್ವರ್ತನೆ ತೋರಿದ ಕಾರಣದಿಂದ ಮುಜುಗರವಾಗಿದೆ. ಅವರು ಹಿಂದೆಯೇ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರಾದರೂ, ಅದು ಸಮರ್ಪಕವಾಗಿಲ್ಲದ ಕಾರಣ, ಸದಸ್ಯತ್ವವನ್ನು ನೀಡಿರಲಿಲ್ಲ. ಅರೆಬೆತ್ತಲಾಗಿ ಪ್ರತಿಭಟನೆ ಮಾಡಿರುವುದರಿಂದ ದುರ್ವರ್ತನೆ ಎಂದು ಪರಿಗಣಿಸಿ ಸದಸ್ಯತ್ವ ನೀಡದಿರಲು ಸಂಸ್ಥೆ ನಿರ್ಧರಿಸಿದೆ.

ಈ ನಡುವೆ ಶ್ರೀ ರೆಡ್ಡಿ ಅವರ ವಿರುದ್ಧ ಸಾರ್ವಜನಿಕವಾಗಿ ಅಶ್ಲೀಲ ವರ್ತನೆ ತೋರಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...