alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿಯ ಈ ಚಿತ್ರ ಹಾಕಿದ ಐಶ್ ಹೇಳಿದ್ದೇನು…?

71 ನೇ ಕೇನ್ಸ್ ಚಿತ್ರೋತ್ಸವ ಅಂತಿಮ ಹಂತ ತಲುಪಿದೆ. ಅಂತೆಯೇ ಎಲ್ಲಾ ನಟಿಯರು ಚಿತ್ರ -ವಿಚಿತ್ರ ಉಡುಗೆಯೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಹಾಗೆಯೇ ನಟಿ ಐಶ್ವರ್ಯ ರೈ ಕೂಡಾ ಕೇನ್ಸ್ ನಲ್ಲಿ ತಮ್ಮ ಅಪಿಯರೆನ್ಸ್ ತೋರಿಸಿದ್ರು. ಸಿಲ್ವರ್ ಬಣ್ಣದ ಗೌನ್ ತೊಟ್ಟ ಐಶ್ ಕೆಂಪುಹಾಸಿನ ಮೇಲೆ ಹೆಜ್ಜೆ ಹಾಕ್ತಿದ್ರೆ, ಅಲ್ಲಿದ್ದ ಜನರು ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಿದ್ರು.

ಮೊನ್ನೆಯಷ್ಟೇ ಇನ್ಸ್ಟಾಗ್ರಾಂ ಖಾತೆ ತೆರೆದಿರುವ ಐಶ್ವರ್ಯ, ಕೇನ್ಸ್ ಚಿತ್ರೋತ್ಸವದ ಫೋಟೋಗಳನ್ನು ಅದರಲ್ಲಿ ಅಪ್ ಡೇಟ್ ಮಾಡಿದ್ದಾರೆ. ಅದರಲ್ಲೂ ಇಷ್ಟು ವರ್ಷದ ಅವರ ಕೇನ್ಸ್ ರೆಡ್ ಕಾರ್ಪೆಟ್ ಗಳಲ್ಲಿ ಈ ಬಾರಿ ವಿಶೇಷವಾದ ಫೋಟೋವೊಂದನ್ನು ಹಾಕಿದ್ದಾರೆ. ಅದು ತಮ್ಮ ಮುದ್ದಾದ ಮಗಳು ಆರಾಧ್ಯ ಫೋಟೋ.

ಡಿಸೈನರ್ ಮೈಕಲ್ ಸಿನೋನ್ ತಯಾರಿಸಿದ್ದ ಕೆಂಪು ಬಣ್ಣದ, ಚಿಟ್ಟೆಯಂತಿದ್ದ ಗೌನ್ ಧರಿಸಿದ್ದಾಳೆ ಆರಾಧ್ಯ. ಆರಾಧ್ಯ ಈ ಗೌನ್ ಹಾಕಿಕೊಂಡಿರುವ ಪೋಟೋ ತೆಗೆದು ಐಶ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಹಾಗೆಯೇ ಆ ಫೋಟೋಗೆ ‘ಸನ್ ಶೈನ್ ಅಂಡ್ ರೈನ್ಬೋ’ ಎಂದು ಅಡಿಬರಹ ಕೊಟ್ಟು ಇದು ಐಶ್ವರ್ಯ ತುಂಬಾ ಇಷ್ಟ ಪಡುವ ಫೋಟೋ ಅಂತಾ ಬರೆದಿದ್ದಾರೆ. ಕೇನ್ಸ್ ಚಿತ್ರೋತ್ಸವದಲ್ಲಿ ಅಮ್ಮನ ಜೊತೆಗೆ ಮಗಳು ಮಿಂಚುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...