alex Certify
ಕನ್ನಡ ದುನಿಯಾ       Mobile App
       

Kannada Duniya

ಪಾತ್ರಗಳಿಗೆ ಜೀವ ತುಂಬಿದ್ದ ಅಪ್ರತಿಮ ಕಲಾವಿದ ಚಂದ್ರಶೇಖರ್

‘ಸಂತೋಷ.. ಆಹಾ.. ಸಂಗೀತ.. ಆಹಾ’ ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ. ಬೈಕ್ ನಲ್ಲಿ ನಟಿ ಜಯಂತಿ ಅವರನ್ನು ಕೂರಿಸಿಕೊಂಡು ಹಾಡುತ್ತಾ ಸಾಗುವ ಸ್ಪುರದ್ರೂಪಿ ನಟ ಚಂದ್ರಶೇಖರ್ ಕಣ್ಣ ಮುಂದೆ ನಿಲ್ಲುತ್ತಾರೆ.

‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಕೆನಡಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 80 ರ ದಶಕದಲ್ಲಿ ಜನಪ್ರಿಯ ನಟರಾಗಿದ್ದ ಚಂದ್ರಶೇಖರ್ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಂತರ ಅವರು ಕುಟುಂಬ ಸಮೇತ ಕೆನಡಾದಲ್ಲಿ ನೆಲೆಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಮತ್ತೆ ವಾಪಸ್ ಆಗಿದ್ದ ಅವರು, ‘ಕೆಂಪಮ್ಮನ ಕೋರ್ಟ್ ಕೇಸ್’ ಸಿನಿಮಾ ನಿರ್ದೇಶಿಸಿದ್ದರಲ್ಲದೇ, ಪೋಷಕ ಪಾತ್ರಗಳಲ್ಲಿಯೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು.

‘ಶಿವಲಿಂಗ’, ‘ಅಸ್ತಿತ್ವ’, ‘ರೋಸ್’, ‘ಕಾರಂಜಿ’, ‘ಪೂರ್ವಾಪರ’ ‘ಹಾಗೇ ಸುಮ್ಮನೆ’ ‘ಮಾನಸ ಸರೋವರ’, ‘ಪಾಯಿಂಟ್ ಪರಿಮಳ’ ‘ಗುರುಶಿಷ್ಯರು’, ‘ಆರಾಧನೆ’, ‘ಮಹಾಪುರುಷ’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ತಮ್ಮ ವಿಭಿನ್ನ ನಟನೆಯ ಮೂಲಕ ಪಾತ್ರಗಳಿಗೆ ಜೀವತುಂಬಿದ್ದಾರೆ.

ಕೆನಡಾದಲ್ಲಿ ಅವರ ಪತ್ನಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದರು. ಅವರನ್ನು ನೋಡಲು ತೆರಳಿದ್ದ ಚಂದ್ರಶೇಖರ್ ನಿಧನರಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕೆಲವರ್ಷಗಳ ಕಾಲ ಕೆನಡಾದಲ್ಲಿ ನೆಲೆಸಿದ್ದ ಅವರು ಮತ್ತೆ ಬಣ್ಣ ಹಚ್ಚಿದ್ದರು. ತಮ್ಮ ಆಪ್ತ ವಲಯದಲ್ಲಿ ‘ಕೆನಡಾ ಚಂದ್ರು’  ಎಂದೇ ಖ್ಯಾತರಾಗಿದ್ದರು. ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಆರೋಗ್ಯವಾಗಿಯೇ ಚಂದ್ರಶೇಖರ್ ಕೆನಡಾಕ್ಕೆ ತೆರಳಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...