alex Certify
ಕನ್ನಡ ದುನಿಯಾ       Mobile App
       

Kannada Duniya

ಮನಸ್ಸು ಮಾಡಿದ್ರೆ ಒಂದು ನಿಮಿಷದಲ್ಲೇ ಮುಖ್ಯಮಂತ್ರಿ ಆಗ್ತಾರಂತೆ ಈ ನಟಿ…!

ನಾನು ಮನಸ್ಸು ಮಾಡಿದರೆ ಕೇವಲ ಒಂದೇ ನಿಮಿಷದಲ್ಲಿ ಮುಖ್ಯಮಂತ್ರಿ ಆಗಬಲ್ಲೆ. ಆದ್ರೆ ನನಗದು ಇಷ್ವವಿಲ್ಲ. ನನ್ನ ಸ್ವಾತಂತ್ರ್ಯವನ್ನ ಕಳೆದುಕೊಂಡು ಆ ಹುದ್ದೆಯಲ್ಲಿ ಬಂಧಿಯಾಗುವ ಆಸೆ ನನಗಿಲ್ಲ ಎಂದಿದ್ದಾರೆ ನಟಿ ಕಮ್ ರಾಜಕಾರಣಿ ಹೇಮಾಮಾಲಿನಿ. ಮಥುರಾದ ಸಂಸದೆಯಾಗಿರುವ ಹೇಮಾ ಮಾಲಿನಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಈ ಮಾತು ಹೇಳಿದ್ದಾರೆ.

ಬಿಜೆಪಿ ಸಂಸದೆಯಾಗಿರುವ ಹೇಮಾಮಾಲಿನಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಗಮನದಲ್ಲಿಟ್ಟುಕೊಂಡೇ ಈ ಮಾತು ಹೇಳಿರೋದು ಅತ್ಯಂತ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಆಗೋದು ನನಗೆ ಕಷ್ಟದ ಕೆಲಸವಲ್ಲ. ಒಂದೇ ನಿಮಿಷದಲ್ಲಿ ನಾನು ಸಿಎಂ ಆಗಬಲ್ಲೆ. ಮುಖ್ಯಮಂತ್ರಿ ಆಗುವ ಅರ್ಹತೆ ನನಗಿದೆ. ಹಾಗಂತ ಆ ಹುದ್ದೆ ಹಿಂದೆ ನಾನು ಹೋಗೋದಿಲ್ಲ. ಅವಕಾಶ ಬರುವವರೆಗೂ ಕಾಯ್ತೀನಿ ಎಂದಿದ್ದಾರೆ ಬಿಜೆಪಿ ಸಂಸದೆ.

ನಟಿಯ ಇಮೇಜ್ ನಿಂದಲೇ ಲೋಕಸಭಾ ಸ್ಥಾನಕ್ಕೆ ಆಯ್ಕೆಯಾದ ನಾನು ಇಂದಿಗೂ ಅಷ್ಟೇ ಖ್ಯಾತಿಯನ್ನ ಹೊಂದಿದ್ದೇನೆ. ಸಿನಿಮಾ ರಂಗದ ಬಲದಿಂದಲೇ ನಾನು ಕಳೆದ 15 ವರ್ಷಗಳಿಂದ ರಾಜಕೀಯ ರಂಗದಲ್ಲಿದ್ದೀನಿ ಎಂದಿದ್ದಾರೆ ಕನಸಿನ ಕನ್ಯೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...