alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ದರ್ಶನ್ ಸಹೋದರನಿಂದ ‘ಬುಲೆಟ್’ ಗೆ ಜೀವ ಬೆದರಿಕೆ

bullet pra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ, ನಿರ್ಮಾಪಕ, ನಿರ್ದೇಶಕ ದಿನಕರ್ ತೂಗುದೀಪ ಅವರು ಬೆದರಿಕೆ ಹಾಕಿದ್ದಾರೆ. ಅವರ ಜೊತೆಗಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಬುಲೆಟ್ ಪ್ರಕಾಶ್ ಆರೋಪಿಸಿದ್ದಾರೆ. ಸಿನಿಮಾ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದರ್ಶನ್ ಅವರ ಸಿನಿಮಾ ನಿರ್ಮಾಣ ಮಾಡಲು ತಾವು ಮುಂದಾಗಿದ್ದು, ಇದನ್ನು ಸಹಿಸಿಕೊಳ್ಳದೇ ಕಾಲ್ ಶೀಟ್ ವಿಚಾರಕ್ಕೆ ತಗಾದೆ ತೆಗೆದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಪೋನ್ ಮಾಡಿ ತಮ್ಮನ್ನು ಕೆಂಪಾಪುರದ ರಾಜನ್ ಸ್ಟುಡಿಯೋ ಬಳಿ ಕರೆಸಿಕೊಂಡ ದಿನಕರ್, ಜೀವ ಬೆದರಿಕೆ ಹಾಕಿದರು. ಅವರ ಜೊತೆಗಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದರು. ನಂತರದಲ್ಲಿಯೂ ತಮಗೆ ಹಲವು ಬಾರಿ ಫೋನ್ ಮಾಡಿ ಬೆದರಿಕೆ ಹಾಕಲಾಗಿದ್ದು, ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಬುಲೆಟ್ ಪ್ರಕಾಶ್ ತಿಳಿಸಿದ್ದಾರೆ.

ಆದರೆ, ಬುಲೆಟ್ ಪ್ರಕಾಶ್ ಆರೋವನ್ನು ನಿರಾಕರಿಸಿರುವ ದಿನಕರ್ ತೂಗುದೀಪ, ಕುಡಿದು ಬಾಯಿಗೆ ಬಂದಂತೆ ಮಾತಾಡಿದ ಕಾರಣ ಸ್ಟುಡಿಯೋ ಬಳಿ ಬರುವಂತೆ ಹೇಳಿದೆ. ಬುಲೆಟ್ ತಮ್ಮ ಮಗಳೊಂದಿಗೆ ಬಂದಿದ್ದರಿಂದ, ಏನೂ ಮಾತಾಡದೇ ಅಲ್ಲಿಂದ ಹೊರಟೆ. ನಾನೇಕೆ ಬೆದರಿಕೆ ಹಾಕಲಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...