alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಳಿಯಿಂದ ಪಾರಾದ ಹೇಮಾ ಮಾಲಿನಿ

ಮಥುರಾ: ಬಿ.ಜೆ.ಪಿ. ಸಂಸದೆ ಹೇಮಾ ಮಾಲಿನಿ ಉತ್ತರ ಪ್ರದೇಶದ ಮಥುರಾ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೂಳಿ ದಾಳಿಯಿಂದ ಪಾರಾಗಿದ್ದಾರೆ.

ನಿಲ್ದಾಣದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲು ಹೇಮಾ ಮಾಲಿನಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ.

ಅವರು ಪರಿಶೀಲನೆ ನಡೆಸುವಾಗಲೇ ಗೂಳಿಯೊಂದು ನುಗ್ಗಿ ಬಂದಿದೆ. ಅಲ್ಲಿದ್ದವರೊಬ್ಬರು ತಡೆದರೂ, ಹೇಮಾ ಮಾಲಿನಿ ಅವರತ್ತಲೇ ಗೂಳಿ ನುಗ್ಗಿದ್ದು, ಬಳಿಕ ಪಕ್ಕದಲ್ಲೇ ಹಾದು ಹೋಗಿದೆ.

ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಹೇಮಾ ಮಾಲಿನಿ ಅವರ ರಕ್ಷಣೆಗೆ ಸುತ್ತುವರೆದಿದ್ದು, ಗೂಳಿ ಅಲ್ಲಿಂದ ಓಡಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ನಿಲ್ದಾಣದೊಳಗೆ ಗೂಳಿ ನುಗ್ಗಿರುವ ಈ ದೃಶ್ಯವನ್ನು ಅಲ್ಲಿದ್ದವರೊಬ್ಬರು ಚಿತ್ರೀಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...