alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯಂತೆ ಕಾಣಲು ಬಯಸಿದ್ದ ಮಹಿಳೆ ಬದುಕಿದ್ದೇ ಹೆಚ್ಚು

ಸೆಲೆಬ್ರಿಟಿಗಳು, ಸಿನೆಮಾ ತಾರೆಯರಂತೆ ಸುಂದರವಾಗಿ ಕಾಣಬೇಕು ಅಂತಾ ಎಲ್ರೂ ಆಸೆಪಡೋದು ಸಹಜ. ಆದ್ರೆ ಇದಕ್ಕಾಗಿ ದುಸ್ಸಾಹಸಕ್ಕೆ ಕೈಹಾಕಿ ಪ್ರಾಣಕ್ಕೇ ಅಪಾಯ ತಂದುಕೊಳ್ಳುವವರೂ ಇದ್ದಾರೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಕಿಮ್ ಕರ್ದಾಶಿಯನ್ ಳಂತೆ ಕಾಣಬೇಕೆಂದು ಬಯಸಿದ್ದಳು.

ಇದಕ್ಕಾಗಿ ಪೃಷ್ಠ ಹಾಗೂ ಸ್ತನಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಇದಕ್ಕಾಗಿ ಆಕೆ ಟರ್ಕಿಯ ಕ್ಲಿನಿಕ್ ಒಂದಕ್ಕೆ ತೆರಳಿದ್ಲು. ಶಸ್ತ್ರಚಿಕಿತ್ಸೆಗಾಗಿ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಆದ್ರೆ ಸರ್ಜರಿ ವೇಳೆ ಮಹಿಳೆ ಬದುಕಿದ್ದೇ ಹೆಚ್ಚು. ಅಪಾಯಕಾರಿ ಚಿಕಿತ್ಸೆಯಿಂದ ಅವಳು ಸಾವಿನ ಮನೆಯ ಕದ ತಟ್ಟಿ ಬಂದಿದ್ದಾಳೆ.

ಮಹಿಳೆಯ ಹೊಟ್ಟೆ ಮತ್ತು ಬೆನ್ನಿನಲ್ಲಿದ್ದ ಕೊಬ್ಬನ್ನು ತೆಗೆದು ಪೃಷ್ಠ ಮತ್ತು ಸ್ತನಗಳಿಗೆ ಜೋಡಿಸುವ ಪ್ರಕ್ರಿಯೆ ಇದು. ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರ್ಜರಿ ಬಳಿಕ ಒಂದು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು.

ಆದ್ರೆ ಮಹಿಳೆ 2 ದಿನಗಳ ಬಳಿಕ ಇಂಗ್ಲೆಂಡ್ ಗೆ ಪ್ರಯಾಣ ಮಾಡಿದ್ದಾಳೆ. ಇಂಗ್ಲೆಂಡ್ ತಲುಪಿದ್ದ ಮಹಿಳೆಯ ಉಸಿರಾಟ ಏರುಪೇರಾಗಿತ್ತು, ಶ್ವಾಸಕೋಶವೇ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆಕೆಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಕೂಡಲೇ ಚಿಕಿತ್ಸೆ ದೊರಕಿದ್ದರಿಂದ ಬದುಕಿ ಉಳಿದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...