alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್-ಅನುಷ್ಕಾರ ಈ ದಾಖಲೆಯನ್ನು ಮುರಿದ ರಣವೀರ್-ದೀಪಿಕಾ

ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೈಡ್ ಹಾಕುವ ಮೂಲಕ‌ ಹೊಸದೊಂದು ದಾಖಲೆ ಬರೆದಿದ್ದಾರೆ.

ಹೌದು, ಇಟಲಿಯಲ್ಲಿ ವಿವಾಹ ಬಂಧನಕ್ಕೊಳಗಾದ ರಣ್-ದೀಪಾ ಜೋಡಿಯ ಫೋಟೋವನ್ನು ರಣವೀರ್ ಸಿಂಗ್ ತಮ್ಮ ಖಾತೆಯಲ್ಲಿ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ 26 ಲಕ್ಷ ಲೈಕ್‌ಗಳನ್ನು ಪಡೆಯುವ ಮೂಲಕ‌ ವಿರಾಟ್-ಅನುಷ್ಕಾ ಶರ್ಮಾ ಜೋಡಿಯನ್ನು ಸೈಡ್ ಹಾಕಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದ ವಿರಾಟ್ ಕೊಹ್ಲಿ,‌ ಅನುಷ್ಕಾ ಶರ್ಮಾ ಅವರ ವಿವಾಹದ ಫೋಟೋವನ್ನು ಅನುಷ್ಕಾ ಹಾಕಿದಾಗ, 15 ಗಂಟೆಯೊಳಗೆ 25 ಲಕ್ಷ ಲೈಕ್ ದಾಟಿತ್ತು. ಆದರೆ ಈ ಹೊಸ ಜೋಡಿಯ ಫೋಟೋ ಇದಕ್ಕಿಂತ ಹೆಚ್ಚು ಲೈಕ್ ಗಳಿಸಿದೆ.

ರಣವೀರ್ ಹಾಕಿದ ಫೋಟೋಗೆ ಲೈಕ್ ಗಳು ಇನ್ನು ಬರುತ್ತಿದ್ದು, ಆರು‌ ವರ್ಷದ ಬಳಿಕ‌ ಮದುವೆಯ ಬಂಧನದಲ್ಲಿರುವ ನವ ವಿವಾಹಿತ ಜೋಡಿಗೆ ನೆಟ್ಟಿಗರು‌ ಶುಭಾಶಯ ಕೋರುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...