alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರಿಯಕರ ಸಾವನ್ನಪ್ಪಿದ್ದಕ್ಕೆ ಆತ್ಮಹತ್ಯೆಗೆತ್ನಿಸಿದ ನಟಿ

ತಾನು ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ದೂರವಾಗಿದ್ದ ನಟಿಯೊಬ್ಬರು ಆತ ಆತ್ಮಹತ್ಯೆ ಮಾಡಿಕೊಂಡನೆಂಬ ಸುದ್ದಿ ತಿಳಿದು ತಾವೂ ಆತ್ಮಹತ್ಯೆಗೆತ್ನಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ತಮಿಳು ಚಿತ್ರ ನಟಿ ನಿಲನಿ ಆತ್ಮಹತ್ಯೆಗೆತ್ನಿಸಿದವರಾಗಿದ್ದು, ನೆರೆಹೊರೆಯವರು ಕೂಡಲೇ ಅವರನ್ನು ರೋಯಾಪೆಟ್ಟಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.

ನಿಲನಿ ಹಾಗೂ ಗೌರಿ ಲಲಿತ್ ಕುಮಾರ್ ಎಂಬವರು ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದರೆನ್ನಲಾಗಿದೆ. ಅಲ್ಲದೆ ಗೌರಿ ಲಲಿತ್ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೈಲಾಪುರ ಪೊಲೀಸ್ ಠಾಣೆಯಲ್ಲಿ ನಿಲನಿ ಪ್ರಕರಣ ದಾಖಲಿಸಿದ್ದರೆಂದು ತಿಳಿದುಬಂದಿದೆ.

ಹೀಗಾಗಿ ಗೌರಿ ಲಲಿತ್ ಕುಮಾರ್ ಗುರುವಾರದಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇದನ್ನು ತಿಳಿದ ನಿಲನಿ ಕೂಡ ಸೊಳ್ಳೆ ಬತ್ತಿ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...