alex Certify
ಕನ್ನಡ ದುನಿಯಾ       Mobile App
       

Kannada Duniya

ಐದೇ ದಿನದಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದೆ ಧೋನಿ ಚಿತ್ರ

05_10_2016-dhoni-film1-1

ಬಾಲಿವುಡ್ ನಲ್ಲಿ ಎಂ.ಎಸ್. ಧೋನಿ ಚಿತ್ರ ಮೋಡಿ ಮಾಡ್ತಾ ಇದೆ. ಕೂಲ್ ಕ್ಯಾಪ್ಟನ್ ಧೋನಿ ಜೀವನ ಚರಿತ್ರೆ ಆಧಾರಿತ ‘ಎಂ.ಎಸ್. ಧೋನಿ:ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ದಟ್ಟವಾಗಿದೆ.

ಚಿತ್ರ ಬಿಡುಗಡೆಯಾಗಿ ಐದು ದಿನ ಕಳೆದಿದೆ. ಆದ್ರೂ ಚಿತ್ರ ಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಕಾಣ್ತಾ ಇದೆ. ವೀಕ್ ಡೇಸ್ ನಲ್ಲಿ ಕೂಡ ಅಭಿಮಾನಿಗಳಿಗೆ ಟಿಕೆಟ್ ಸಿಗ್ತಾ ಇಲ್ಲ. ನಿನ್ನೆ ಮಂಗಳವಾರ ಚಿತ್ರ 7.52 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರ ತಂಡ ಈವರೆಗೆ 82.5 ಕೋಟಿ ಕಲೆಕ್ಷನ್ ಮಾಡಿದಂತಾಗಿದೆ.

ಬಿಡುಗಡೆಯಾದ ಮೊದಲ ದಿನವೇ ಚಿತ್ರ 21.30 ಕೋಟಿ ರೂ. ಗಳಿಕೆ ಕಂಡಿತ್ತು. ಶನಿವಾರ 20.60 ಹಾಗೂ ರವಿವಾರ 24.10 ಕೋಟಿ ಕಲೆಕ್ಷನ್ ಮಾಡಿತ್ತು. ಸೋಮವಾರ 8.51 ಕೋಟಿ ರೂಪಾಯಿ ಗಳಿಸಿದೆ. ಚಿತ್ರಕ್ಕಾಗಿ ಸುಶಾಂತ್ ಸಿಂಗ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದಕ್ಕೀಗ ತಕ್ಕ ಪ್ರತಿಫಲ ಸಿಗ್ತಾ ಇದೆ. ಚಿತ್ರ 120 ಕೋಟಿ ಗಳಿಸಬಹುದೆಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...