alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರೇ ದಿನಗಳಲ್ಲಿ 100 ಕೋಟಿ ಗಳಿಸಿದ ‘ದಂಗಲ್’

dangal-poster-large-380

ಸಿನಿಪ್ರಿಯರಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಬಿಡುಗಡೆಯಾದ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ರಿಲೀಸ್ ಆಗಿ ಕೇವಲ 3 ದಿನಗಳಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ‘ಸುಲ್ತಾನ್’ ಮತ್ತು ‘ಭಜರಂಗಿ ಭಾಯಿಜಾನ್’ ಚಿತ್ರಗಳನ್ನು ಬಿಟ್ರೆ ಮೊದಲ ವೀಕೆಂಡ್ ನಲ್ಲೇ 100 ಕೋಟಿ ಕಮಾಯಿ ಮಾಡಿದ ಚಿತ್ರ ‘ದಂಗಲ್’. ಮೊದಲ ವೀಕೆಂಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೆಯ ಸಿನಿಮಾ ಇದು.

ಮೊದಲ ದಿನವೇ ‘ದಂಗಲ್’ 41.25 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಮೂರು ದಿನಗಳಲ್ಲಿ ‘ದಂಗಲ್’ ಗಳಿಕೆ 104.25 ಕೋಟಿ ರೂಪಾಯಿ ಆಗಿದ್ದು, ಸಲ್ಮಾನ್ ನಟನೆಯ ಸುಲ್ತಾನ್ ಚಿತ್ರ 105.55 ಕೋಟಿ ರೂಪಾಯಿ ಗಳಿಸಿತ್ತು. ಸದ್ಯದಲ್ಲೇ ಅಮೀರ್ ಖಾನ್ ರ ಈ ಚಿತ್ರ 200 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆ ‘ಪಿಕೆ’ಗಿದ್ದು ಆ ದಾಖಲೆಯನ್ನು ‘ದಂಗಲ್’ ಮುರಿಯಬಹುದು ಅನ್ನೋ ನಿರೀಕ್ಷೆ ಅಭಿಮಾನಿಗಳಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...