alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಲ್ಪಾ ಶೆಟ್ಟಿ ಫೋಟೋ ಕ್ಲಿಕ್ಕಿಸಿದ್ದವರ ಮೇಲೆ ಹಲ್ಲೆ

ಸೆಲೆಬ್ರಿಟಿಗಳು ಕ್ಯಾಮರಾ ಕಣ್ಣಿಗೆ ಆಹಾರವಾಗೋದು ಹೊಸದೇನಲ್ಲ. ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಆಗಿ ತಾರೆಯರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಛಾಯಾಗ್ರಾಹಕರು ಕೂಡ ಮುಗಿಬೀಳ್ತಾರೆ. ಸೆಲೆಬ್ರಿಟಿಗಳ ಫೋಟೋ ಕ್ಲಿಕ್ಕಿಸಲು ಹೋಗಿ ಎಷ್ಟೋ ಬಾರಿ ಛಾಯಾಗ್ರಾಹಕರು ಮತ್ತು ಪತ್ರಕರ್ತರು ಸಂಕಷ್ಟಕ್ಕೆ ಸಿಲುಕ್ತಾರೆ.

ಕಳೆದ ರಾತ್ರಿ ಮುಂಬೈನ ರೆಸ್ಟೋರೆಂಟ್ ನಲ್ಲಿ ವರದಿಗಾರರ ಮೇಲೆ ದೌರ್ಜನ್ಯ ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಮತ್ತಾಕೆಯ ಪತಿ ರಾಜ್ ಕುಂದ್ರಾರ ಫೋಟೋ ತೆಗೆಯಲು ಯತ್ನಿಸಿದ್ದಕ್ಕೆ, ಇಬ್ಬರು ಪತ್ರಕರ್ತರ ಮೇಲೆ ರೆಸ್ಟೋರೆಂಟ್ ನ ಬೌನ್ಸರ್ ಗಳು ಹಲ್ಲೆ ನಡೆಸಿದ್ದಾರೆ. ಮನಬಂದಂತೆ ಥಳಿಸಿದ್ದಾರೆ.

ಬಾಂದ್ರಾದ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ. ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಫೋಟೋ ಕ್ಲಿಕ್ಕಿಸೋದಕ್ಕೆ ಆಕ್ಷೇಪಿಸಿರಲಿಲ್ಲ. ಪೋಸ್ ಕೊಡಲು ಸಿದ್ಧರಿದ್ರು. ಆದ್ರೆ ಬೌನ್ಸರ್ ಗಳು ವಿನಾಕಾರಣ ಹಲ್ಲೆ ಮಾಡಿದ್ದಾರೆ. ಬೌನ್ಸರ್ ಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...