alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿನ ಕುರಿತು ಮೌನ ಮುರಿದ ಪತಿ

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ನಮ್ಮೊಂದಿಗಿಲ್ಲವಾದ್ರೂ ಅವರ ನೆನಪು ಅಳಿಯಲು ಸಾಧ್ಯವಿಲ್ಲ. ಪತ್ನಿ ಶ್ರೀದೇವಿ ಕಳೆದುಕೊಂಡು ಕುಸಿದು ಹೋಗಿರುವ ಪತಿ ಬೋನಿ ಕಪೂರ್, ಇದೇ ಮೊದಲ ಬಾರಿ ಪತ್ನಿ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ. ಬೋನಿ ಟ್ವೀಟರ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಸ್ನೇಹಿತೆ, ಪತ್ನಿ, ಎರಡು ಮಕ್ಕಳ ತಾಯಿಯನ್ನು ಕಳೆದುಕೊಂಡ ದುಃಖವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನೋವಿನಲ್ಲಿರುವಾಗ ನನಗೆ ಧೈರ್ಯ ತುಂಬಿ ನನ್ನ ಜೊತೆ ನಿಂತ ಹಿತೈಷಿಗಳು, ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಅರ್ಜುನ್ ಹಾಗೂ ಅನುಷಾ ಪ್ರೀತಿ ಹಾಗೂ ಬೆಂಬಲದಿಂದಾಗಿ ನಾನು ದುಃಖದ ಕ್ಷಣಗಳಲ್ಲಿ ಜಾಹ್ನವಿ, ಖುಷಿಗೆ ಧೈರ್ಯ ತುಂಬಲು ಸಹಾಯವಾಯ್ತು ಎಂದು ಬೋನಿ ಕಪೂರ್ ಟ್ವಿಟ್ ಮಾಡಿದ್ದಾರೆ.

ಜಗತ್ತಿನ ಜನರಿಗೆ ಅವರು ಚಾಂದನಿಯಾಗಿದ್ದರು. ಅತ್ಯುತ್ತಮ ನಟಿಯಾಗಿದ್ದರು. ಅವರ ಶ್ರೀದೇವಿಯಾಗಿದ್ದರು. ಆದ್ರೆ ನನಗೆ ನನ್ನ ಪ್ರೀತಿ, ಸ್ನೇಹಿತೆ, ನನ್ನಿಬ್ಬರು ಮಕ್ಕಳ ತಾಯಿಯಾಗಿದ್ದರು. ನನ್ನ ಸಂಗಾತಿ ಶ್ರೀದೇವಿ ನಮ್ಮ ಮಕ್ಕಳಿಗೆ ಎಲ್ಲವೂ ಆಗಿದ್ದರು. ಅವರಿಂದಲೇ ನಮ್ಮ ಮನೆ ನಡೆಯುತ್ತಿತ್ತು. ಈಗ ನನ್ನ ಗಮನ ನನ್ನ ಮಕ್ಕಳನ್ನು ನೋಡಿಕೊಳ್ಳುವುದು ಹಾಗೂ ಶ್ರೀದೇವಿಯಿಲ್ಲದೆ ಮುಂದೆ ಸಾಗುವುದಾಗಿದೆ ಎಂದು ಬೋನಿ ಟ್ವಿಟ್ ಮಾಡಿದ್ದಾರೆ. ಜೊತೆಗೆ ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...