alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮೇಶ್ವರಂನಲ್ಲಿ ತಾಯಿಯ ಅಸ್ಥಿ ವಿಸರ್ಜಿಸಿದ ಶ್ರೀದೇವಿ ಪುತ್ರಿಯರು

ಕಳೆದ ಶನಿವಾರದಂದು ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿಯವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಮುಂಬೈನ ವಿಲೆಪಾರ್ಲೆಯಲ್ಲಿರುವ ಚಿತಾಗಾರದಲ್ಲಿ ನೆರವೇರಿದೆ.

ಗಣ್ಯಾತಿಗಣ್ಯರು ಸೇರಿದಂತೆ ಶ್ರೀಸಾಮಾನ್ಯರವರೆಗೆ ಸಹಸ್ರಾರು ಮಂದಿ ಅಗಲಿದ ನಟಿಯ ಅಂತಿಮ ದರ್ಶನ ಪಡೆದಿದ್ದಾರೆ. ಎಲ್ಲ ಪ್ರಕ್ರಿಯೆಗಳ ನಡುವೆ ಶ್ರೀದೇವಿಯವರ ಪತಿ ಬೋನಿ ಕಪೂರ್ ತಮ್ಮ ಸ್ನೇಹಿತ ಕೋಮಲ್ ನಹತಾ ಜೊತೆ ಫೆಬ್ರವರಿ 24 ರಂದು ಸಂಜೆ ನಡೆದಿದ್ದೇನು ಎಂಬುದರ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದು, ಇದನ್ನು ಕೋಮಲ್ ತಮ್ಮ ಅಧಿಕೃತ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಶ್ರೀದೇವಿಯವರ ಪುತ್ರಿ ಜಾಹ್ನವಿ ಕಪೂರ್ ಕೂಡಾ ತಮ್ಮ ತಾಯಿಯೊಂದಿಗಿನ ಮಧುರ ಕ್ಷಣಗಳನ್ನು ಹಾಗೂ ತಂದೆ-ತಾಯಿ ನಡುವಿನ ಬಾಂಧವ್ಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮಧ್ಯೆ ಅಂತ್ಯಸಂಸ್ಕಾರ ಬಳಿಕದ ಪ್ರಕ್ರಿಯೆಗಳನ್ನೂ ಕುಟುಂಬಸ್ಥರು ಪೂರೈಸಿದ್ದು, ಶ್ರೀದೇವಿಯವರ ಅಸ್ಥಿಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ವಿಧಿ ವಿಧಾನದಂತೆ ಭಾನುವಾರಂದು ವಿಸರ್ಜನೆ ಮಾಡಲಾಗಿದೆ. ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಶ್ರೀದೇವಿಯವರ ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಅಸ್ಥಿಯನ್ನು ವಿಸರ್ಜಿಸಿ ವಾಪಾಸ್ ಮುಂಬೈಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...