alex Certify
ಕನ್ನಡ ದುನಿಯಾ       Mobile App
       

Kannada Duniya

ಇರ್ಫಾನ್, ಸೋನಾಲಿ ನಂತ್ರ ಬೊಮನ್ ಇರಾನಿಗೆ ಕಾಡ್ತಿದೆ ಈ ಕಾಯಿಲೆ

ಬಾಲಿವುಡ್ ನಟರ ಖಾಯಿಲೆ ಸುದ್ದಿ ಅಭಿಮಾನಿಗಳನ್ನು ದುಃಖಕ್ಕೆ ನೂಕಿದೆ. ಇರ್ಫಾನ್ ಖಾನ್, ಸೋನಾಲಿ ಬೇಂದ್ರೆ ನಂತ್ರ ಈಗ ಬೊಮನ್ ಇರಾನಿ ಸರದಿ. ಬೊಮನ್ ಇರಾನಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

58 ವರ್ಷದ ಬೊಮನ್ ಇರಾನಿ, ಟ್ವೀಟರ್ ಅಕೌಂಟ್ ನಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ಫೋಟೋ ಮೂಲಕ ತಾನು ಯಾವ ಸಮಸ್ಯೆ ಎದುರಿಸುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ. ವಿಮಾನದಿಂದ ಕೆಳಗಿಳಿಯುತ್ತಿರುವ ಬೊಮನ್ ಇರಾನಿ ಗಾಲಿ ಕುರ್ಚಿ ಮೇಲೆ ಕುಳಿತಿದ್ದಾರೆ.

ಫೋಟೋ ಜೊತೆ ಹುಸೇನ್ ಹಾಗೂ ಶ್ರೀನಿವಾಸ್ ಗೆ ಧನ್ಯವಾದ ಹೇಳಿದ್ದಾರೆ ಇರಾನಿ. ಹೈದ್ರಾಬಾದ್ ನಿಂದ ಹಿಂತಿರುಗುತ್ತಿದ್ದಾಗ ಸಹಾಯ ಮಾಡಿದ ನಿಮಗೆ ಧನ್ಯವಾದ ಎಂದಿರುವ ಇರಾನಿ, ಸ್ಲಿಪ್ ಡಿಸ್ಕ್ ಸಮಸ್ಯೆಗೊಳಗಾಗಿದ್ದಾರಂತೆ. ಅಷ್ಟೇ ಅಲ್ಲ ಮೊಣಕಾಲು ನೋವು ಅವ್ರನ್ನು ಕಾಡುತ್ತಿದೆಯಂತೆ. ನಡೆದಾಡಲು ಕಷ್ಟವಾಗ್ತಿದೆ ಎಂದು ಇರಾನಿ ಟ್ವಿಟ್ ಮಾಡಿದ್ದಾರೆ. ಬೊಮನ್ ಇರಾನಿ ಈ ಟ್ವಿಟ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...