alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ಜೊತೆ 21 ಕೋಟಿ ಕಳೆದುಕೊಂಡ ಬಾಲಿವುಡ್ ನಟ..!

ranbir-kat-new

ಹೊಸ ವರ್ಷದ ಆರಂಭ ಬಾಲಿವುಡ್ ಬಹು ಚರ್ಚಿತ ಜೋಡಿ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಗೆ ಚೆನ್ನಾಗಿರಲಿಲ್ಲ. ಅವರು ಬಹಿರಂಗವಾಗಿ ಏನೇ ಹೇಳದೆ ಇದ್ದರೂ ಅವರು ಬೇರೆಯಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದ್ರೆ ಈಗಿನ ವಿಷ್ಯ ಅದಲ್ಲ. ಬ್ರೇಕ್ ಅಪ್ ರಣಬೀರ್ ಗೆ ಮಾತ್ರ ದುಬಾರಿಯಾಗಿ ಪರಿಣಮಿಸಿದೆ.

ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತಿದ್ದಂತೆ ಒಂದಾಗಿ ಬಾಳಲು ನಿರ್ಧರಿಸಿದ್ದರು. ಹಾಗೇ ಮನೆ ಬಿಟ್ಟು ಬಂದ ರಣಬೀರ್, ಕತ್ರಿನಾ ಜೊತೆ ವಾಸಿಸಲು ಶುರು ಮಾಡಿದ್ದ. ಅದಕ್ಕಾಗಿ ಅಪಾರ್ಟ್ ಮೆಂಟ್ ನಲ್ಲಿ ಮನೆ ಬಾಡಿಗೆ ಪಡೆದಿದ್ದ. 15 ಲಕ್ಷ ರೂಪಾಯಿ ಬಾಡಿಗೆಯ ಅಪಾರ್ಟ್ ಮೆಂಟ್ ಗೆ ರಣವೀರ್ 21 ಕೋಟಿ ಸೆಕ್ಯೂರಿಟಿ ಹಣವನ್ನು ಇಟ್ಟಿದ್ದ.

ಇಬ್ಬರೂ ಈಗ ಬೇರೆ ಬೇರೆಯಾಗಿದ್ದಾರೆ. ಈಗಾಗಲೇ ರಣಬೀರ್ ಹೊಸ ಮನೆ ಪ್ರವೇಶ ಮಾಡಿ, ಒಂದು ಪಾರ್ಟಿ ಕೂಡ ಕೊಟ್ಟಿದ್ದಾನೆ. ಆದ್ರೆ ಹಳೆ ಅಪಾರ್ಟ್ ಮೆಂಟ್ ಗೆ ಹೋಗಿ ಒಂದು ವರ್ಷ ಕೂಡ ಆಗಿರಲಿಲ್ಲ. ಲೀಜ್ ಮುಗಿಯುವ ಮುನ್ನವೇ ಮನೆ ಬಿಟ್ಟಿರುವುದರಿಂದ 21 ಕೋಟಿ ಹಣವನ್ನೂ ರಣಬೀರ್ ಕೈಬಿಡಬೇಕಾಗಿದೆ. ಕತ್ರಿನಾ ಜೊತೆ ಹಣವನ್ನೂ ಕಳೆದುಕೊಂಡಿದ್ದಾನೆ ಬಾಲಿವುಡ್ ನಟ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...