alex Certify
ಕನ್ನಡ ದುನಿಯಾ       Mobile App
       

Kannada Duniya

ಈ ತಾರಾ ದಂಪತಿಗಳ ವಯಸ್ಸಿನ ನಡುವಿದೆ ಅಂತರ

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ವಯವಾಗಿರುತ್ತೆ ಅನ್ನೋದು ವಾಡಿಕೆ. ಪ್ರೀತಿಗೆ  ವಯಸ್ಸಿನ ಮಿತಿ ಇಲ್ಲ. ವಯಸ್ಸಿನ ಅಂತರವಿದ್ದರೂ ಜೊತೆಯಾಗಿರುವ ಸೆಲೆಬ್ರಿಟಿ ಜೋಡಿಗಳ ಪಟ್ಟಿ ಇಲ್ಲಿದೆ ನೋಡಿ.

ಬಾಲಿವುಡ್ ಮಿ. ಫರ್ಫೆಕ್ಟ್ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿ ವಯಸ್ಸಿನ ಅಂತರ 9 ವರ್ಷ. ಇವರಿಬ್ಬರೂ ಮದುವೆಯಾಗಿದ್ದು 2005 ರಲ್ಲಿ.

ಚಾಕೋಲೇಟ್ ಬಾಯ್ ಅಂತಲೇ ಫೇಮಸ್ ಆಗಿದ್ದ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ದಂಪತಿಯ ವಯಸ್ಸಿನ ಅಂತರ ಬರೋಬ್ಬರಿ 13 ವರ್ಷ.

ಬಾಲಿವುಡ್ ಬೇಬೋ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ವಯಸ್ಸಿನ ಅಂತರ 10 ವರ್ಷ. ಇವರಿಬ್ಬರದೂ ಲವ್ ಮ್ಯಾರೇಜ್.

ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ ಡಿಸೋಜಾ ದಂಪತಿ ವಯಸ್ಸಿನ ಅಂತರ 9 ವರ್ಷ. ಇವರಿಬ್ಬರದೂ ಲವ್ ಮ್ಯಾರೇಜ್.

ಸೋಹಾ ಅಲಿ ಖಾನ್ ಹಾಗೂ ಕುನಾಲ್ ಖೆಮು ದಾಂಪತ್ಯ ಬೆಸೆದುಕೊಂಡಿದ್ದು 2015ರಲ್ಲಿ. ಇವರಿಬ್ಬರ ನಡುವೆ 5 ವರ್ಷ ವಯಸ್ಸಿನ ಅಂತರವಿದೆ.

ನಟಿ ಊರ್ಮಿಳಾ ಮಾತೋಡ್ಕರ್ ಹಾಗೂ ಬ್ಯುಸಿನೆಸ್ ಮ್ಯಾನ್ ಮೋಸಿನ್ ಅಕ್ತರ್ ಮಿರ್ ಜೋಡಿಯ ವಯಸ್ಸಿನ ಅಂತರ 10 ವರ್ಷ.

ಡ್ರೀಮ್ ಗರ್ಲ್ ಹೇಮಾ ಮಾಲಿನಿ ಹಾಗೂ ನಟ ಧರ್ಮೇಂದ್ರ ದಂಪತಿ ವಯಸ್ಸಿನ ಅಂತರ ಬರೋಬ್ಬರಿ 13 ವರ್ಷ.

ನಟಿ ಆಸಿನ್ ಹಾಗೂ ಬ್ಯುಸಿನೆಸ್ ಮ್ಯಾನ್ ರಾಹುಲ್ ಶರ್ಮ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಆಸಿನ್ ಗಿಂತ ರಾಹುಲ್ ಸುಮಾರು 10 ವರ್ಷ ದೊಡ್ಡವರು.

ಬಾಲಿವುಡ್ ನ ಟ್ರಾಜಿಡಿ ಕಿಂಗ್ ದಿಲೀಪ್ ಕುಮಾರ್ ಹಾಗೂ ಗೋಲ್ಡನ್ ಗರ್ಲ್ ಸಾಯಿರಾ ಬಾನು ದಾಂಪತ್ಯದಲ್ಲಿ ವಯಸ್ಸಿನ ಅಂತರ 22 ವರ್ಷ. ಸಾಯಿರಾಗಿಂತ ದಿಲೀಪ್ ಕುಮಾರ್ 22 ವರ್ಷ ದೊಡ್ಡವರು.

ತನ್ನ 70 ನೇ ವಯಸ್ಸಿನಲ್ಲಿ ಮದುವೆಯಾದ ಕಬೀರ್ ಬೇಡಿ ಗಿಂತ ಪತ್ನಿ ಪರ್ವೀನ್ ದುಸಂಜ್ ಬರೋಬ್ಬರಿ 28 ವರ್ಷ ಚಿಕ್ಕವರು.

ನಿರ್ದೇಶಕಿ, ಕೋರಿಯೋಗ್ರಾಫರ್ ಫರಾಹ್ ಖಾನ್ ಹಾಗೂ ಶಿರಿಶ್ ಕುಂದರ್ ದಂಪತಿ ನಡುವಿನ ವಯಸ್ಸಿನ ಅಂತರ 8 ವರ್ಷ.

ನಟ ಜಾನಿ ಡಿಪ್ ಹಾಗೂ ನಟಿ ಅಂಬರ್ ಹಿಯರ್ಡ್ ನಡುವಿನ ವಯಸ್ಸಿನ  ಅಂತರ 23 ವರ್ಷ.

ಅಮೇರಿಕನ್ ಸ್ನಿಪರ್ ಸ್ಟಾರ್ ಬ್ರಾಡ್ಲಿ ಕೂಪರ್ 40 ವರ್ಷದವರಾಗಿದ್ದರೆ ಪತ್ನಿ ಸುಖಿ ವಾಟೆರ್ ಹೌಸ್ ಗೆ 23 ವರ್ಷ.

ಆಸ್ಕರ್ ವಿಜೇತರಾದ ಮಿಚೀಲ್ ಡೋಗ್ಲಾಸ್  ಹಾಗೂ ಕ್ಯಾಥರಿನ್ ಝೆಟಾ ದಂಪತಿ ನಡುವಿನ ವಯಸ್ಸಿನ ಅಂತರ 25 ವರ್ಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...