alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಖ್ ಸಿನಿಮಾಕ್ಕೆ ಟಕ್ಕರ್ ಕೊಡಲಿವೆ ಈ ಚಿತ್ರಗಳು

bollywood-actor-shah-rukh-k-1472216631

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 2016 ರಲ್ಲಿ ಕೊಟ್ಟಿದ್ದು ಒಂದೇ ಚಿತ್ರ. ‘ಫ್ಯಾನ್’ ಚಿತ್ರಕ್ಕಾಗಿ ಶಾರುಖ್ ಈ ವರ್ಷವನ್ನು ಮೀಸಲಿಟ್ಟಿದ್ದರು. ಆದ್ರೆ ‘ಫ್ಯಾನ್’ ಚಿತ್ರ ಶಾರುಖ್ ಅಂದುಕೊಂಡಷ್ಟು ಅಭಿಮಾನಿಗಳ ಮನಸ್ಸು ಗೆಲ್ಲಲಿಲ್ಲ.

2015ರಲ್ಲಿ ಕೂಡ ‘ದಿಲ್ವಾಲೆ’ ಹಿಟ್ ಆಗಲಿಲ್ಲ. ‘ಬಾಜಿರಾವ್ ಮಸ್ತಾನಿ’ ಮುಂದೆ ಮಂಡಿಯೂರಿತ್ತು. ಇನ್ನು 2017 ರಲ್ಲಿ ಕೂಡ ಶಾರುಖ್ ಇದೇ ಪರಿಸ್ಥಿತಿ ಎದುರಿಸುವ ಸಾಧ್ಯತೆ ದಟ್ಟವಾಗಿದೆ.

2017 ರಲ್ಲಿ ಶಾರುಖ್ ಅಭಿನಯದ ಮೂರು ಚಿತ್ರಗಳು ತೆರೆಗೆ ಬರಲಿವೆ. ಆದ್ರೆ ಶಾರುಖ್ ಚಿತ್ರ ಬಿಡುಗಡೆ ದಿನದಂದೇ ಮಹಾನ್ ನಟರ ಚಿತ್ರಗಳು ಕೂಡ ತೆರೆಗೆ ಬರಲು ಸಿದ್ಧವಾಗಿವೆ. ಶಾರುಖ್ ಅಭಿನಯದ Raees ಜನವರಿ 26, 2017 ರಂದು ತೆರೆಗೆ ಬರ್ತಾ ಇದೆ. ಅಂದೇ ಹೃತಿಕ್ ಅಭಿನಯದ ‘ಕಾಬಿಲ್’ ಕೂಡ ಬಿಡುಗಡೆಯಾಗ್ತಾ ಇದೆ.

ಇನ್ನು ಬಾದ್ ಶಾ ಅಭಿನಯದ ಇನ್ನೊಂದು ಚಿತ್ರ ‘ದ ರಿಂಗ್’. ಇದು ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಆದ್ರೆ ಅಂದು ಅಕ್ಷಯ್ ಕುಮಾರ್ ಅಭಿನಯದ ‘ಕ್ರ್ಯಾಕ್’ ತೆರೆಗೆ ಬರ್ತಾ ಇದೆ.

ಹಾಗೆ ಆನಂದ್ ಎಲ್ ರೈರ ಮೂರನೇ ಚಿತ್ರ ದೀಪಾವಳಿ ಅಥವಾ ಕ್ರಿಸ್ಮಸ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ದೀಪಾವಳಿಯಂದು ಅಜಯ್ ಚಿತ್ರ ಬಿಡುಗಡೆಯಾಗ್ತಾ ಇದ್ದರೆ, ರಣಬೀರ್ ಕಪೂರ್ ಚಿತ್ರ ಕ್ರಿಸ್ಮಸ್ ಗೆ ತೆರೆಗೆ ಬರಲು ಸಿದ್ಧವಾಗ್ತಾ ಇದೆ. ಹಾಗಾಗಿ ಶಾರುಖ್ ಚಿತ್ರಕ್ಕೆ ಟಕ್ಕರ್ ಕೊಡಲು ಈಗಾಗಲೇ ಅನೇಕ ಚಿತ್ರಗಳು ಸಿದ್ಧವಾಗಿದ್ದು, ಯಾರಿಗೆ ಗೆಲುವು ಎಂಬುದನ್ನು ಕಾದು ನೋಡಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...