alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಜನಪ್ರಿಯ ಜೋಡಿಗಳ ಬ್ರೇಕಪ್ ಸ್ಟೋರಿ

salman6ಬಾಲಿವುಡ್ ನಲ್ಲಿ ನಟ-ನಟಿಯರು ಒಂದಾಗೋದು ಅಷ್ಟೇ ವೇಗದಲ್ಲಿ ಬೇರೆಯಾಗೋದು ಹೊಸ ವಿಷಯವೇನಲ್ಲ. ಆದರೆ ಕೆಲ ಜನಪ್ರಿಯ ಜೋಡಿಗಳ ಬ್ರೇಕಪ್ ಆದಾಗ ಬಾಲಿವುಡ್ ಮಂದಿ ಹುಬ್ಬೇರಿಸಿದ್ದರು. ಅಂತಹ ಕೆಲ ಜನಪ್ರಿಯ ಜೋಡಿಯ ವಿವರ ಇಲ್ಲಿದೆ.

ಬಾಲಿವುಡ್ ನಲ್ಲಿ ಆ ಕಾಲದಲ್ಲಿ ಭಾರೀ ಜನಪ್ರಿಯವಾಗಿದ್ದು ಬಿಗ್ ಬಿ ಅಮಿತಾಬ್ ಹಾಗೂ ರೇಖಾ ಜೋಡಿ. ಇವರಿಬ್ಬರ ಸಂಬಂಧದ ಕುರಿತು ಪತ್ರಿಕೆಗಳಲ್ಲಿ ಪದೇ ಪದೇ ವರದಿಯಾಗುತ್ತಿದ್ದರೂ ಇಬ್ಬರೂ ಈ ಕುರಿತು ತುಟಿ ಬಿಚ್ಚಿರಲಿಲ್ಲ. ಇಬ್ಬರು ವಿವಾಹವಾಗಲಿದ್ದಾರೆಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿರುವಾಗಲೇ ಅಮಿತಾಬ್ ಬಚ್ಚನ್, ಜಯಬಾಧುರಿಯವರನ್ನು ವಿವಾಹವಾದರು. ಬಳಿಕ ಪತ್ರಿಕಾ ಸಂದರ್ಶನವೊಂದರಲ್ಲಿ ಅಮಿತಾಬ್, ರೇಖಾ ಜೊತೆಗಿನ ಸಂಬಂಧ ನಿರಾಕರಿಸಿದ್ದರೆ ರೇಖಾ ಮಾತ್ರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಬಾಲಿವುಡ್ ಚಿತ್ರರಂಗದಲ್ಲಿ ಬ್ಯಾಡ್ ಬಾಯ್ ಎಂದೇ ಹೆಸರಾಗಿದ್ದ ಸಲ್ಮಾನ್ ಖಾನ್ ರ ಲವ್ ಅಫೇರ್ ಕೂಡಾ ವಿವಾದಗಳಿಂದಲೇ ಕೂಡಿತ್ತು. ಐಶ್ವರ್ಯಾ ರೈ ಬಗ್ಗೆ ವಿಪರೀತ ಪೊಸೆಸಿವ್ ನೆಸ್ ಹೊಂದಿದ್ದ ಸಲ್ಮಾನ್ ಈ ಕಾರಣಕ್ಕಾಗಿಯೇ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ರೋಸತ್ತು ಹೋಗಿದ್ದ ಐಶ್ವರ್ಯಾ ಒಂದು ಹಂತದಲ್ಲಿ ಪೊಲೀಸರಿಗೆ ದೂರು ಕೊಡಲೂ ಮುಂದಾಗಿದ್ದರೆನ್ನಲಾಗಿದೆ. ಬಳಿಕ ಈ ಜೋಡಿ ಬೇರ್ಪರ್ಟಿದ್ದು, ಐಶ್ವರ್ಯಾ, ಅಭಿಷೇಕ್ ಬಚ್ಚನ್ ಜೊತೆ ವಿವಾಹವಾದರು.

ನಂತರ ಸಲ್ಮಾನ್ ಹೆಸರು ಕೇಳಿ ಬಂದಿದ್ದು ಕತ್ರೀನಾ ಕೈಫ್ ಜೊತೆ. ಕತ್ರೀನಾಳನ್ನು ಬಾಲಿವುಡ್ ಚಿತ್ರರಂಗಕ್ಕೆ ಪರಿಚಯಿಸಿದ್ದು ಸಲ್ಮಾನ್. ಯಾವಾಗ ಕತ್ರೀನಾ, ರಣಬೀರ್ ಕಪೂರ್ ರತ್ತ ಆಕರ್ಷಿತರಾದರೋ ಸಲ್ಮಾನ್, ಕತ್ರೀನಾಗೆ ಗುಡ್ ಬೈ ಹೇಳಿದ್ದರು. ರಣಬೀರ್ ಜೊತೆಗೆ ಲಿವ್ ಇನ್ ರಿಲೇಶನ್ ನಲ್ಲಿದ್ದ ಕತ್ರೀನಾ ‘ಜಗ್ಗಾ ಜಾಸೂಸ್’ ಚಿತ್ರೀಕರಣದ ಸಂದರ್ಭದಲ್ಲಿಯೇ ದೂರವಾದರು. ಕತ್ರೀನಾ ಕೈಫ್ ಜೊತೆಗಿನ ಸಂಬಂಧಕ್ಕೂ ಮುನ್ನ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರೆನ್ನಲಾಗಿದ್ದು, ಆದರೆ ಇದು ಕೂಡಾ ಹೆಚ್ಚು ಕಾಲ ಉಳಿಯಲಿಲ್ಲ.

ಅಕ್ಷಯ್ ಕುಮಾರ್ ಹಾಗೂ ಶಿಲ್ಪಾ ಶೆಟ್ಟಿ ನಡುವಿನ ಪ್ರೇಮ ಸಂಬಂಧ ಬಾಲಿವುಡ್ ನಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೆ ಶಿಲ್ಪಾ ಶೆಟ್ಟಿಗೆ ಕೈಕೊಟ್ಟ ಅಕ್ಷಯ್, ಟ್ವಿಂಕಲ್ ಖನ್ನಾ ಜೊತೆ ವಿವಾಹವಾದರು. ಶಾಹೀದ್ ಕಪೂರ್ ಹಾಗೂ ಕತ್ರೀನಾ ಕೈಫ್ ಕೂಡಾ ಪರಸ್ಪರ ಆಕರ್ಷಿತರಾಗಿದ್ದರಲ್ಲದೇ ತಮ್ಮಿಬ್ಬರ ಪ್ರೀತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ ಇಬ್ಬರ ಸಂಬಂಧದಲ್ಲಿ ನಂತರ ಬಿರುಕು ಮೂಡಿದ್ದು, ಕತ್ರೀನಾ, ಸೈಫ್ ಆಲಿಖಾನ್ ಜೊತೆ ವಿವಾಹವಾದರೆ ಶಾಹೀದ್ ಕಪೂರ್ ಮೀರಾ ರಜ್ಪೂತ್ ಕೈ ಹಿಡಿದರು. ಹಲವು ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ನಲ್ಲಿದ್ದ ಜಾನ್ ಅಬ್ರಹಾಂ ಹಾಗೂ ಬಿಪಾಷಾ ಬಸು ಜೋಡಿ ಕೂಡಾ ನಂತರ ಬೇರ್ಪಟ್ಟಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...