alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ, ಕತ್ರೀನಾಗೆ ಸೆಡ್ಡು ಹೊಡೆದ ದೀಪಿಕಾ..!

deepika 1ಬಾಲಿವುಡ್ ನ ಮಸ್ತಾನಿ ದೀಪಿಕಾ ಪಡುಕೋಣೆ ಈಗ ನಂಬರ್ 1 ಹಿರೋಯಿನ್. ಕೇವಲ ಜನಪ್ರಿಯತೆಯಲ್ಲಿ ಮಾತ್ರವಲ್ಲ ಸಂಭಾವನೆಯಲ್ಲೂ ಗುಳಿಕೆನ್ನೆ ಬೆಡಗಿ ಬಿಟೌನ್ ನ ತಾರೆಯರನ್ನೆಲ್ಲ ಹಿಂದಿಕ್ಕಿದ್ದಾಳೆ. ಕರೀನಾ, ಪ್ರಿಯಾಂಕಾಗೆ ಸೆಡ್ಡು ಹೊಡೆದಿದ್ದಾಳೆ.

ಸದ್ಯ ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕೆ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಳಂತೆ. ಕರೀನಾ ಹಾಗೂ ಪ್ರಿಯಾಂಕಾ 9 ಕೋಟಿ ರೂ. ಡಿಮ್ಯಾಂಡ್ ಮಾಡ್ತಾರೆ. ಕತ್ರೀನಾ ಕೈಫ್, ಆಲಿಯಾ ಭಟ್ ಕೂಡ ರೇಸ್ ನಲ್ಲೀಗ ಹಿಂದೆ ಬಿದ್ದಿದ್ದಾರೆ. ಕಳೆದ 2 ವರ್ಷಗಳಿಂದ ದೀಪಿಕಾ ಸೂಪರ್ ಹಿಟ್ ಚಿತ್ರಗಳ ಅಲೆಯಲ್ಲೇ ತೇಲುತ್ತಿದ್ದಾಳೆ.

ಇದೀಗ ಹಾಲಿವುಡ್ ನಲ್ಲೂ ದೀಪಿಕಾರದ್ದೇ ಮಾತು. ‘ಬಾಜಿರಾವ್ ಮಸ್ತಾನಿ’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ಮತ್ತೊಂದು ಚಿತ್ರದಲ್ಲಿ ನಟಿಸಲು ಸೈ ಎಂದಿರುವ ದೀಪಿಕಾ, 15 ಕೋಟಿ ರೂಪಾಯಿ ಸಂಭಾವನೆ ಕೇಳ್ತಿದ್ದಾರಂತೆ. ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾಗೆ ಮತ್ತೊಮ್ಮೆ ರಣವೀರ್ ಸಿಂಗ್ ಜೋಡಿಯಾಗಲಿದ್ದಾರೆ. ಒಟ್ಟಾರೆ ಬಾಲಿವುಡ್ ನಲ್ಲಿ ದೀಪಿಕಾಳ ಹವಾ ನೋಡಿ ಅದೆಷ್ಟು ನಟಿಮಣಿಯರು ಹೊಟ್ಟೆ ಉರ್ಕೊಂಡ್ರೋ, ಎಷ್ಟು ಮಂದಿ ಖುಷಿ ಪಟ್ರೊ ಗೊತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...